ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಯ್ಯಪ್ಪನ ಮೂರ್ತಿ ಪ್ರತಿಷ್ಠಾಪನೆ - ಮಧ್ಯೆ ಪ್ರವೇಶಿಸಿದ ಶ್ರೀರಾಮ ಸೇನೆ

ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದ ಬೆಳಗಾವಿ ರಸ್ತೆಯಲ್ಲಿರುವ ಜಮೀನಿನಲ್ಲಿ ಅಯ್ಯಪ್ಪ ಸ್ವಾಮಿ ಮೂರ್ತಿ ಹಾಗೂ ಸುಬ್ರಹ್ಮಣ್ಯ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ವಿಚಾರ ದಿನದಿಂದ ದಿನಕ್ಕೆ ದೊಡ್ಡಮಟ್ಟದಲ್ಲೇ ಸುದ್ದಿಯಾಗುತ್ತಿದೆ.

ಇದೀಗ ಈ ವಿಷಯಕ್ಕೆ ಶ್ರೀರಾಮ ಸೇನೆ ಎಂಟ್ರಿ ಕೊಟ್ಟಿದೆ. ಅಯ್ಯಪ್ಪ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಸ್ಥಳಕ್ಕೆ ಭೇಟಿ ನೀಡಿದ ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಅವರು, ಅಯ್ಯಪ್ಪ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಈ ಭಾಗದಲ್ಲಿ ಅಯ್ಯಪ್ಪನ ದೇವಸ್ಥಾನ ಅಗತ್ಯವಿತ್ತು. ಈ ರಸ್ತೆಯಲ್ಲಿ ಸಾಕಷ್ಟು ಅಪಘಾತಗಳಾಗುತ್ತಿದ್ದವು.

ಈಗ ಅದನ್ನೆಲ್ಲ ತಡೆಗಟ್ಟುವಂತೆ ಧಾರವಾಡದ ಮುಖ್ಯದ್ವಾರದ ಬಳಿ ಅಯ್ಯಪ್ಪ ವಿರಾಜಮಾನರಾಗಿದ್ದಾರೆ. ಕೃಷಿ ವಿಶ್ವವಿದ್ಯಾಲಯ ಇದನ್ನು ತೆರವುಗೊಳಿಸುವ ಕೆಲಸಕ್ಕೆ ಮುಂದಾಗಬಾರದು. ಈ ಎರಡ್ಮೂರು ಗುಂಟೆ ಜಾಗವನ್ನು ದೇವಸ್ಥಾನಕ್ಕೆ ಕೊಡಬೇಕು. ಒಂದು ವೇಳೆ ತೆರವಿಗೆ ಮುಂದಾದರೆ ದೊಡ್ಡಮಟ್ಟದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದರು.

ಸದ್ಯ ಆ ಸ್ಥಳಕ್ಕೆ ಹಲವರು ಭೇಟಿ ನೀಡಿ ಕುತೂಹಲದಿಂದ ಅಯ್ಯಪ್ಪನ ಮೂರ್ತಿ ವೀಕ್ಷಣೆ ಮಾಡುವುದರ ಜೊತೆಗೆ ದರ್ಶನ ಕೂಡ ಪಡೆದುಕೊಳ್ಳುತ್ತಿದ್ದಾರೆ. ಅಯ್ಯಪ್ಪನ ಮಾಲಾಧಾರಿಗಳಂತೂ ಅಲ್ಲಿಗೆ ಬಂದು ಪೂಜೆ, ಪುನಸ್ಕಾರ ಮಾಡುತ್ತಿದ್ದಾರೆ. ಒಟ್ಟಾರೆ ದಿನದಿಂದ ದಿನಕ್ಕೆ ಈ ಮೂರ್ತಿ ಪ್ರತಿಷ್ಠಾಪನೆ ವಿಚಾರ ದೊಡ್ಡಮಟ್ಟದಲ್ಲೇ ಪ್ರಚಾರವಾಗುತ್ತಿದೆ.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/01/2025 02:33 pm

Cinque Terre

123.59 K

Cinque Terre

10

ಸಂಬಂಧಿತ ಸುದ್ದಿ