ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಅಯ್ಯಪ್ಪಸ್ವಾಮಿಗೆ ನಿರ್ಮಾಣವಾಗೇಬಿಟ್ಟಿತು ತಾತ್ಕಾಲಿಕ ಮಂದಿರ

ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದ ಬೆಳಗಾವಿ ರಸ್ತೆಯಲ್ಲಿರುವ ಜಮೀನಿನಲ್ಲಿ ಯಾರೋ ಅಯ್ಯಪ್ಪ ಸ್ವಾಮಿ ಹಾಗೂ ಸುಬ್ರಹ್ಮಣ್ಯ ಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಿ ಹೋಗಿದ್ದರು. ಈ ವಿಚಾರ ದೊಡ್ಡಮಟ್ಟದಲ್ಲೇ ಚರ್ಚೆಯಾಗಿತ್ತು.

ಇದೀಗ ಈ ವಿಚಾರದಲ್ಲಿ ಶ್ರೀರಾಮ ಸೇನೆ ಮಧ್ಯೆ ಪ್ರವೇಶಿಸಿ ಆ ಅಯ್ಯಪ್ಪನ ಮೂರ್ತಿಗೆ ತಾತ್ಕಾಲಿಕ ದೇವಸ್ಥಾನ ನಿರ್ಮಾಣ ಮಾಡಿಯೇ ಬಿಟ್ಟಿದೆ. ನಿನ್ನೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮತಾಲಿಕ್ ಅವರು ಸ್ಥಳಕ್ಕೆ ಭೇಟಿ ನೀಡಿ, ಈ ಮೂರ್ತಿಯನ್ನು ತೆರವುಗೊಳಿಸಬಾರದು. ತೆರವುಗೊಳಿಸಿದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಅಲ್ಲದೇ ನಿನ್ನೆ ರಾತ್ರಿಯೇ ಸ್ಥಳಕ್ಕೆ ಸಿಮೆಂಟ್ ಇಟ್ಟಿಗೆ, ತಗಡಿನ ಶೀಟ್‌ಗಳನ್ನು ತರಿಸಿ ರಾತ್ರಿಯೇ ಅಯ್ಯಪ್ಪನ ಮೂರ್ತಿಗೆ ತಾತ್ಕಾಲಿಕ ದೇವಸ್ಥಾನ ನಿರ್ಮಿಸಲಾಗಿದೆ. ಕೃಷಿ ವಿವಿಯು ಅಯ್ಯಪ್ಪನ ಮೂರ್ತಿ ತೆರವುಗೊಳಿಸಲು ಮುಂದಾಗಿತ್ತು. ಆದರೆ, ಅದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಅಷ್ಟಕ್ಕೇ ಬಿಟ್ಟಿದೆ. ಸದ್ಯಕ್ಕಂತೂ ಅಯ್ಯಪ್ಪನ ಮೂರ್ತಿಗೆ ತಾತ್ಕಾಲಿಕ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/01/2025 07:41 pm

Cinque Terre

246.85 K

Cinque Terre

8

ಸಂಬಂಧಿತ ಸುದ್ದಿ