ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹೆಬ್ಬಾಳ್ಕರ್, ರವಿ ಜಟಾಪಟಿ ವಿಚಾರ - ಪಂಚನಾಮೆಗೆ ಅನುಮತಿ ಕೊಟ್ಟಿಲ್ಲ ಎಂದ ಸಭಾಪತಿ

ಧಾರವಾಡ: ಬೆಳಗಾವಿಯಲ್ಲಿ ನಡೆದ ಅಧಿವೇಶನದ ವೇಳೆ ಪರಿಷತ್‌ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಪರಿಷತ್ ಸದಸ್ಯ ಸಿ.ಟಿ.ರವಿ ಮಧ್ಯೆ ನಡೆದ ಜಟಾಪಟಿ ವಿಚಾರವನ್ನು ಸರ್ಕಾರ ಸಿಐಡಿಗೆ ವಹಿಸಿದೆ.

ಇದೇ ವಿಚಾರವಾಗಿ ಧಾರವಾಡದಲ್ಲಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿದ್ದಾರೆ.

ಸಿಐಡಿಯಿಂದ ಸ್ಥಳ ಮಹಜರು ಮಾಡುತ್ತಾರೆ ಎಂಬ ಮಾಹಿತಿ ಇದೆ. ಅದಕ್ಕೆ ನಾವು ಇನ್ನೂ ಅನುಮತಿ ಕೊಟ್ಟಿಲ್ಲ. ಪಂಚನಾಮೆ ಯಾವಾಗ ಮಾಡುತ್ತೀರಿ ಎಂದು ಕೇಳಿದ್ದೆವು. ಅವರು ಏನೂ ಹೇಳಿಲ್ಲ. ಯಾವಾಗ ಪಂಚನಾಮೆ ಮಾಡುತ್ತಾರೆ ಎಂಬುದನ್ನು ತಿಳಿಸಬೇಕು. ಅದನ್ನು ನೋಡಿ ನಾವು ಅನುಮತಿ ಬಗ್ಗೆ ವಿಚಾರ ಮಾಡುತ್ತೇವೆ ಎಂದಿದ್ದಾರೆ.

ಸದ್ಯ ನಾವು ಅನುಮತಿ ಕೊಡಲು ನಿರಾಕರಿಸಿದ್ದೇವೆ. ಈ ಹಿಂದೆ ಯಾವತ್ತೂ ಹೀಗೆ ಆಗಿಲ್ಲ. ಈಗ ಆಗಿದೆ. ಏನೂ ಮಾಡಲು ಆಗುವುದಿಲ್ಲ. ಆಗಿದ್ದನ್ನು ಎದುರಿಸಬೇಕಾಗುತ್ತದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಬಗ್ಗೆ ಪುನರ್ ವಿಚಾರಣೆಗೆ ಮನವಿ ಕೊಟ್ಟಿದ್ದಾರೆ. ಈ ಸಂಬಂಧ ಸೆಕ್ರೆಟರಿ ಹಂತದಲ್ಲಿ ಸಭೆ ಮಾಡುತ್ತಾರೆ. ಸಭೆ ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇವೆ. ಈ ಪ್ರಕರಣವನ್ನು ಸಿಐಡಿಗೆ ಕೊಟ್ಟಿದ್ದೇ ಸರ್ಕಾರ. ನಮ್ಮನ್ನೇನೂ ಕೇಳಿ ಅವರು ಸಿಐಡಿಗೆ ಕೊಟ್ಟಿಲ್ಲ. ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಮಹಜರು ಮಾಡುತ್ತಾರಂತೆ. ಸರ್ಕಾರ ಯಾವುದನ್ನೂ ನಮ್ಮನ್ನು ಕೇಳಿಲ್ಲ. ರವಿ ಬಂಧನದ ನಂತರ ನಮಗೆ ಮಾಹಿತಿ ತಿಳಿಸಿದ್ದಾರೆ. ಈ ಹಿಂದೆ ಮೊದಲೇ ತಿಳಿಸಬೇಕಿತ್ತು. ಆದರೆ, ಈಗ ಪದ್ಧತಿ ಬದಲಿಸಿದ್ದಾರೆ. ರವಿ ಅವರನ್ನು ಸ್ಥಳಕ್ಕೆ ಕರೆದುಕೊಂಡು ಬರುತ್ತಾರಾ ನೋಡಬೇಕು. ನಮ್ಮಲ್ಲಿ ಯಾವುದೇ ರೆಕಾರ್ಡ್ ಇಲ್ಲ. ಏನು ಪಂಚನಾಮೆ ಮಾಡುತ್ತಾರೋ ಗೊತ್ತಿಲ್ಲ. ಅವರು ಏನು ಪಂಚನಾಮೆ ಮಾಡುತ್ತಾರೋ ಅದನ್ನು ತಿಳಿಸಬೇಕು. ಅವರು ತಿಳಿಸಿದ ಮೇಲೆ ಅನುಮತಿ ಬಗ್ಗೆ ವಿಚಾರ ಮಾಡುತ್ತೇವೆ ಎಂದರು.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

06/01/2025 08:43 pm

Cinque Terre

141.84 K

Cinque Terre

2

ಸಂಬಂಧಿತ ಸುದ್ದಿ