ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿಲಿಂಡರ್ ಸ್ಫೋಟ ಪ್ರಕರಣ, ಅನಧಿಕೃತ ಕಟ್ಟಡದ ಬಗ್ಗೆ 2022ರಲ್ಲಿ ಮನವಿ ಮಾಡಿದ್ದರೂ ಪಾಲಿಕೆಯ ನಿರ್ಲಕ್ಷ್ಯ..?

ಹುಬ್ಬಳ್ಳಿ: ಅದೊಂದು ಘಟನೆ ನಿಜಕ್ಕೂ ಹುಬ್ಬಳ್ಳಿ ಮಾತ್ರವಲ್ಲದೇ ರಾಜ್ಯದ ಜನರ ಕಣ್ಣಂಚಲ್ಲಿ ಕಣ್ಣೀರು ಹಾಕಿಸಿರುವ ಸಿಲಿಂಡರ್ ಸ್ಫೋಟ ಪ್ರಕರಣ. ಈ ಪ್ರಕರಣದಿಂದ ಎಂಟು ಜನರು ಜೀವ ಕಳೆದುಕೊಂಡಿದ್ದಾರೆ. ಅನಧಿಕೃತ ಕಟ್ಟಡದ ತೆರವು ಮಾಡಲು ಕಳೆದ ಎರಡು ವರ್ಷಗಳ ಹಿಂದೆಯೇ ಪಾಲಿಕೆಗೆ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿರಲಿಲ್ಲ. ಸಣ್ಣ ಅಜಾಗರೂಕತೆಯಿಂದ ಈಗ ಬಹುದೊಡ್ಡ ಪ್ರಮಾದವೇ ನಡೆದು ಹೋಗಿದೆ..

ಹುಬ್ಬಳ್ಳಿಯ ಅಚ್ಚವ್ವನ ಕಾಲೋನಿಯಲ್ಲಿ ನಡೆದ ಸಿಲಿಂಡರ್ ಸ್ಫೋಟ ಪ್ರಕರಣದ ಬಗ್ಗೆ ಮತ್ತಷ್ಟು ಸ್ಫೋಟಕ ಮಾಹಿತಿಯನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ್ ಬಿಚ್ಚಿಡುತ್ತಿದೆ. ಹೌದು.. ಘಟನೆ ನಡೆದಿರುವ ಆ ಕಟ್ಟಡ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿದೆ. ಅದನ್ನು ತೆರವು ಮಾಡುವಂತೆ ಅಶೋಕ ಕಲ್ಲಪ್ಪ ಚಿಲ್ಲಣ್ಣವರ ಎಂಬುವವರು ಮಹಾನಗರ ಪಾಲಿಕೆಗೆ 28-10-2022ರಂದು ಮನವಿ ಮಾಡಿದ್ದರು. ಆದರೆ ಅಂದಿನ ಪಾಲಿಕೆ ಆಯುಕ್ತರ ಹಾಗೂ ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಈಗ ಬಹುದೊಡ್ಡ ಅನಾಹುತವೇ ನಡೆದು ಹೋಗಿದೆ. ಈ ಘಟನೆಯ ಬಗ್ಗೆ 2022 ರಲ್ಲಿ ಮನವಿ ಸಲ್ಲಿಸಿದ್ದ ಅಶೋಕ ಚಿಲ್ಲಣ್ಣವರು ಮಾಹಿತಿ ಬಿಚ್ಚಿಟ್ಟಿದ್ದಾರೆ.

ಅನಧಿಕೃತವಾಗಿ ರಸ್ತೆಯಲ್ಲಿಯೇ ಕಟ್ಟಡ ನಿರ್ಮಾಣ ಮಾಡಲಾಗಿರುವ ಬಗ್ಗೆ 2022ರಲ್ಲಿಯೇ ಪಾಲಿಕೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾರೊಬ್ಬರೂ ಕಾಳಜಿ ವಹಿಸದೇ ಇರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ. ಸ್ಥಳೀಯರ ಪ್ರಕಾರ ಅನಧಿಕೃತವಾಗಿ ದೇವಸ್ಥಾನದ ಪಕ್ಕದಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದು, ಈ ಬಗ್ಗೆ ಪಾಲಿಕೆ ಅಂದಿನ ದಿನಗಳಲ್ಲಿ ಕ್ರಮ ಜರುಗಿಸಿದ್ದರೇ ಇಂತಹದೊಂದು ಘಟನೆ ಸಂಭವಿಸುತ್ತಿರಲಿಲ್ಲ ಅಂತಾರೇ ಅಶೋಕ ಚಿಲ್ಲಣ್ಣನವರ.

ಒಟ್ಟಿನಲ್ಲಿ ಒಂಬತ್ತು ಜನ ಮಾಲಾಧಾರಿಗಳ ಪೈಕಿ ಈಗ ಎಂಟು ಜನರು ಸಾವನ್ನಪ್ಪಿದ್ದಾರೆ. ಪಾಲಿಕೆಯವರ ನಿರ್ಲಕ್ಷ್ಯದಿಂದ ಇಂತಹದೊಂದು ಘಟನೆ ನಡೆದಿದ್ದು, ಇನ್ನಾದರೂ ಪಾಲಿಕೆಯು ಅನಧಿಕೃತ ಕಟ್ಟಡಗಳ ತೆರವು ಮಾಡುವುದರ ಜೊತೆಗೆ ಮೃತರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/01/2025 08:44 pm

Cinque Terre

129.76 K

Cinque Terre

3

ಸಂಬಂಧಿತ ಸುದ್ದಿ