ಹುಬ್ಬಳ್ಳಿ: ಕೇಂದ್ರ ಸರ್ಕಾರ ಮನಸ್ಸು ಮಾಡಿದ್ರೆ ಡೀಸೆಲ್-ಪೆಟ್ರೋಲ್ ಅನ್ನು 40-30 ರೂಪಾಯಿಗೆ ಕೊಡಬಹುದು.
ಮನಮೋಹನ ಸಿಂಗ್ ಅವರು 103 ಡಾಲರ್‌ಗೆ 1 ಬ್ಯಾರಲ್ ಖರೀದಿ ಮಾಡ್ತಿದ್ರು, 90 ಸಾವಿರ ಕೋಟಿ ಸಬ್ಸಿಡಿ ಕೊಡ್ತಿದ್ರು, ಡಿಸೇಲ್ ಪೆಟ್ರೋಲ್ ಜಾಸ್ತಿಯಾದಾಗ ಎಲ್ಲ ವಸ್ತುಗಳು ದುಬಾರಿಯಾಗುತ್ತವೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಟ್ರಾನ್ಸ್‌ಪೋರ್ಟೇಶನ್ ಜಾಸ್ತಿಯಾದಾಗ ಸಾಮಾನ್ಯ ಜನರಿಗೆ ಹೊರೆಯಾಗುತ್ತದೆ. 2004ರಿಂದ 2014ರವರೆಗೆ 60 ರಿಂದ 56 ರೂಪಾಯಿಗೆ ನಾವು ಕೊಡ್ತಾ ಇದ್ದೇವೆ, ದೇಶದಲ್ಲಿ 25-30 ರೂಪಾಯಿಗೆ ಡೀಸೆಲ್, ಪೆಟ್ರೋಲ್ ಕೊಡಬಹುದು. ರಿಲಯನ್ಸ್ ಪೆಟ್ರೋಲ್ ಬಂಕ್ ಉಳಿಬೇಕು ಅನ್ನೋ ಉದ್ದೇಶದಿಂದ ಕೊಡ್ತಾ ಇಲ್ಲ ಎಂದು ಆರೋಪಿಸಿದರು.
ಕೇಂದ್ರದಲ್ಲಿ ಸಬ್ಸಿಡಿ ಜಾಸ್ತಿ ಮಾಡಿದರೆ ರಿಲಯನ್ಸ್ ಪೆಟ್ರೋಲ್ ಬಂಕ್ ನಮ್ಮೊಂದಿಗೆ ಕಾಂಪಿಟೇಷನ್ ಮಾಡೋಕಾಗಲ್ಲ, ಮನಮೋಹನ್ ಸಿಂಗ್ ಕೊಟ್ಟಂತ ಸಬ್ಸಿಡಿ ಕೊಟ್ರೆ ಭಾರತದಲ್ಲಿರುವಂತಹ ರಿಲಯನ್ಸ್ ಬ್ಯಾಂಕ್ ಎಲ್ಲ ಮುಚ್ಚಿ ಹೋಗುತ್ತವೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/01/2025 02:44 pm