ಹುಬ್ಬಳ್ಳಿ: ಬಸ್ ದರ ಏರಿಕೆಯ ಹಿಂದೆ ಅನೇಕ ಕಾರಣಗಳಿವೆ. ವೈಜ್ಞಾನಿಕವಾಗಿಯೇ ದರ ಏರಿಕೆ ಮಾಡಲಾಗಿದೆ ಎಂದು ಸಚಿವ ಸಂತೋಷ ಲಾಡ್ ಬಸ್ ದರ ಏರಿಕೆ ಮಾಡಿರುವುದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಾರಿಗೆಯಲ್ಲಿ ದಿನಕ್ಕೆ ಒಂದು ಕೋಟಿ 16 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡತ್ತಾರೆ. ಅದರಲ್ಲಿ 65 ಲಕ್ಷ ಜನ ಹೆಣ್ಣು ಮಕ್ಕಳಿದ್ದಾರೆ. ಅದರ ಜೊತೆಗೆ 5,300 ಹೊಸ ಬಸ್‌ಗಳನ್ನು ಖರೀದಿ ಮಾಡಿದ್ದೇವೆ. 8000 ಹೊಸ ಸಿಬ್ಬಂದಿಗಳನ್ನು ತೆಗೆದುಕೊಳ್ಳಲು ಫೈನಾನ್ಸ್ ಡಿಪಾರ್ಟ್ಮೆಂಟ್ ಅನುಮತಿ ಕೊಟ್ಟಿದೆ. ಈಗಾಗಲೇ ನಾಲ್ಕರಿಂದ ಐದು ಸಾವಿರ ಜನರನ್ನು ತೆಗೆದುಕೊಂಡಾಗಿದೆ. ಹೀಗಾಗಿ ದರ ಏರಿಕೆ ಮಾಡಲಾಗಿದೆ ಎಂದರು.
ಇನ್ನು ಬಿಜೆಪಿಯವರು ಬಸ್ ದರ ಏರಿಕೆ ಅವೈಜ್ಞಾನಿಕವಾಗಿ ಮಾಡಿರೋದು ಎಂದು ಹೇಳತ್ತಾ ಇದ್ದಾರೆ. ಅವರು ಬೇಕಾದರೇ ಚರ್ಚೆಗೆ ಬರಲಿ, ಬಂದ್ರೆ ಮಾತನಾಡೋಣ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/01/2025 01:30 pm