ಹುಬ್ಬಳ್ಳಿ: ಅವಳಿನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸಂತಾನ ಹರಣಕ್ಕೆ ಪಾಲಿಕೆಯು ಮುಂದಾಗಿದೆ. ಬೀದಿ ನಾಯಿಗಳಿಂದ ಸಾಕಷ್ಟು ಅವಘಡ ಸಂಭವಿಸುತ್ತಿರುವ ಬೆನ್ನಲ್ಲೇ ಈಗ ವ್ಯವಸ್ಥಿತ ರೀತಿಯಲ್ಲಿ ಕಾರ್ಯಾಚರಣೆ ಮಾಡಿ ಸಂತಾನಹರಣ ಮಾಡಲು ಪಾಲಿಕೆಯು ಮುಂದಾಗಿದೆ.
ಧಾರವಾಡ ಜಿಲ್ಲೆಯ ಸಲಕಿನಕೊಪ್ಪ ಗ್ರಾಮದಲ್ಲಿರುವ ನಾಯಿಗಳ ಸಂತಾನಹರಣದ ಟೀಮ್ ಪರಿಶೀಲನೆಗೆ ಹುಬ್ಬಳ್ಳಿ-ಧಾರವಾಡ ಆರೋಗ್ಯ ಸ್ಥಾಯಿ ಸಮಿತಿ ವತಿಯಿಂದ ಭೇಟಿ ನೀಡಿದ್ದು, ಕೂಡಲೇ ಅವಳಿನಗರದ ಬೀದಿ ನಾಯಿಗಳ ಸಂತಾನೋತ್ಪತ್ತಿಗೆ ಬ್ರೇಕ್ ಹಾಕಲು ಚಿಂತನೆ ನಡೆಸಲಾಗಿದೆ. ಹೌದು.. ಮಹಾನಗರದಲ್ಲಿರುವ ನಾಯಿಗಳನ್ನು ಹಿಡಿದು ಸಂತಾನ ಹರಣ ಮಾಡಲಿಕ್ಕೆ ಸಲಕಿನಕೊಪ್ಪದಲ್ಲಿ ವ್ಯವಸ್ಥಿತವಾದ ಟೀಮ್ ಇದ್ದು, ಈ ಬಗ್ಗೆ ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ಆ ಸ್ಥಳದ ವೀಕ್ಷಣೆಗೆ ಹುಬ್ಬಳ್ಳಿ ಧಾರವಾಡ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರಾಜಣ್ಣ ಕೊರವಿ, ಡಾ. ಶ್ರೀಧರ್ ದಂಡೆಪ್ಪನವರ್, ಡಾ. ಕುಲಕರ್ಣಿ, ಉಣಕಲ್ ಗ್ರಾಮದ ನಿವಾಸಿ ಹನುಮಂತಪ್ಪ ಎಲಿವಾಳ್ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು, ಏಜೆನ್ಸಿಯವರು ಭೇಟಿ ನೀಡಿದ್ದಾರೆ.
ಇನ್ನೂ ಈಗಾಗಲೇ ಸಾಕಷ್ಟು ಬಾರಿಗೆ ಅವಳಿನಗರದ ಜನರು ಪಾಲಿಕೆಗೆ ಬೀದಿ ನಾಯಿಗಳ ಹಾವಳಿ ಬಗ್ಗೆ ದೂರನ್ನು ಸಲ್ಲಿಸಿದ್ದು, ಇನ್ನಾದರೂ ಪಾಲಿಕೆಯು ಸಮರೋಪಾದಿಯಲ್ಲಿ ಕೆಲಸ ಮಾಡುತ್ತದೆಯೋ..? ಕಾದುನೋಡಬೇಕಿದೆ.
Kshetra Samachara
03/01/2025 03:16 pm