ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಸಮಾನತೆಯ ಸಂತ ಸಿದ್ದೇಶ್ವರ ಶ್ರೀಗಳು

ನವಲಗುಂದ : ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಜಗಜ್ಯೋತಿ ಬಸವಣ್ಣನವರ ರೀತಿಯಲ್ಲೇ ಜಾತಿ ಮತ್ತು ವರ್ಗರಹಿತ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಶ್ರೀಗಳ ಬದುಕು ನಮಗೆ ಆದರ್ಶ, ಅವರ ಜೀವನದ ಆಶಯದಂತೆ ಬದುಕುವುದೇ ಅವರಿಗೆ ಸಲ್ಲಿಸುವ ದೊಡ್ಡ ಗೌರವ ಎಂದು ಶಿವರಾಜ ಲಕ್ಕುಂಡಿ ಹೇಳಿದರು.

ನಗರದ ಶ್ರೀ ಲಾಲಗಡಿ ಹನುಮಂತ ದೇವಸ್ಥಾನದಲ್ಲಿ ಆಯೋಜನೆ ಮಾಡಲಾದ ಸಿದ್ಧೇಶ್ವರ ಮಹಾಸ್ವಾಮೀಜಿ ಗುರುನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹನುಮನ ಗೌಡ ಪಾಟೀಲ್, ಸಿದ್ದೇಶ್ವರ ಶ್ರೀಗಳು ಜ್ಞಾನ ಸಂಪಾದಿಸಿ ಅದನ್ನು ಜನಮಾನಸಕ್ಕೆ ಹಂಚಿದರು. ಸರಳ, ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದರು ಎಂದರು.

ಈ ಸಂದರ್ಭದಲ್ಲಿ ಪ್ರಹ್ಲಾದ ಅಗಸಿಮನಿ, ಸಾಯಿ ಕಲಾಲ, ಚೇತನ ಮದಗುನಕಿ, ಜಗ್ಗು ಒಡ್ಡರ, ಚೇತನ ನರಗುಂದ, ಚಂದ್ರ ಮಾಳೆ, ಶ್ರೀಧರ ಸುಬೇಧಾರಮಠ, ವೀರೇಶ್ ಹುಬ್ಬಳ್ಳಿ, ಶ್ರೀ ಲಾಲಗಡಿ ಹನುಮಂತ ದೇವಸ್ಥಾನ ಪಲ್ಲಕಿ ಉತ್ಸವ ಸಮಿತಿ ಸದಸ್ಯರು ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

04/01/2025 08:54 pm

Cinque Terre

16.82 K

Cinque Terre

0

ಸಂಬಂಧಿತ ಸುದ್ದಿ