ನವಲಗುಂದ: ಕಳಸಾ ಬಂಡೂರಿ ಜಾರಿಯಾಗಿ ವರ್ಷಗಳೇ ಉರುಳುತ್ತಿವೆ ಆದರೆ ಇದುವರೆಗೂ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಿಲ್ಲ. ಯುಗಾದಿಯ ಮುಂಚಿತವಾಗಿಯೇ ಮಾರ್ಚ್ 31ರ ರೊಳಗೆ ನಮ್ಮ ಮಹದಾಯಿ ನೀರನ್ನು ನಮಗೆ ನೀಡಿ ಎಂದು ರೈತ ಮುಖಂಡ ಲೋಕನಾಥ ಹೆಬಸೂರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪಟ್ಟಣದ ಅಣ್ಣಿಗೇರಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಸಂಬಂಧಪಟ್ಟ ಇಲಾಖೆಗಳು ಹಾಗೂ ಜನ ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಇದುವರೆಗೂ ಮಹದಾಯಿಯ ನೀರು ಬರುತ್ತಿಲ್ಲ. ಮುಂದಿನ ದಿನಗಳು ಕೂಡ ರಾಜಕಾರಣಿಗಳ ಮೇಲೆ ವಿಶ್ವಾಸ ಇಲ್ಲದಂಥಾಗಿದೆ. ಮಲಪ್ರಭಾ ನದಿಯ ನೀರನ್ನು 24x7 ಕುಡಿಯುವ ನೀರಿನ ಯೋಜನೆಗೆ ನಾಲ್ಕು ಜಿಲ್ಲೆಗಳಿಗೆ ಏನು ಹೋಗುತ್ತದೆಯೋ ಆ ಜಾಗ್ವಾಲ್(ಗೇಟ್)ನ್ನು ಕೂಡಲೇ ಬಂದ ಮಾಡಬೇಕು. ನಮ್ಮ ಮಲಪ್ರಭಾ ಡ್ಯಾಮನ್ನು ನಾವು ರಕ್ಷಣೆ ಮಾಡುವುದು ಅನಿವಾರ್ಯವಾಗಿದೆ.
ಕಳಸಾ ಬಂಡೂರಿ ಕುಡಿಯುವ ನೀರಿಗಾಗಿ ಅವಳಿ ನಗರಗಳಿಗೆ ತಂದು ಕುಡಿಯಲು ನೀಡಿ ಇನ್ನು ಮಾ.31 ರೊಳಗಾಗಿ ಕಾಮಗಾರಿ ಆರಂಭ ಮಾಡದೇ ಹೋದರೆ ಹುಬ್ಬಳ್ಳಿ-ಧಾರವಾಡಕ್ಕೆ ಮಲಪ್ರಭಾ ಡ್ಯಾಮದಿಂದ ಹೋಗುವ ನೀರನ್ನು ಸ್ಥಗಿತಗೊಳಿಸಲು ರೈತ ಹೋರಾಟಗಾರರು ನಿರ್ಧರಿಸಿದ್ದೇವೆ ಎಚ್ಚರಿಕೆ.
ಇನ್ನೂ ರೈತರಿಗೆ ಬೆಳೆವಿಮೆಯು ರಾಜ್ಯ ಸರಕಾರದಿಂದ ಇದುವರೆಗೂ ಬಿಡುಗಡೆಯಾಗಿರುವುದಿಲ್ಲ ಅದನ್ನು ಕೂಡಲೇ ಬಿಡುಗಡೆಗೊಳಿಸಬೇಕು ಇಲ್ಲದೇ ಹೋದರೆ ಜ.31 ರಂದು ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಎಚ್ಚರಿಸಲು ಪಾದಯಾತ್ರೆ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ಈ ವೇಳೆ ಶಂಕರ ಅಂಬಲಿ, ರಘುನಾಥ ನಡುವಿನಮನಿ, ಮಲಕಾಜಗೌಡ ಪಾಟೀಲ, ನಿಂಗಪ್ಪ ನಾವಳ್ಳಿ, ಫಕ್ಕೀರಗೌಡ ದೊಡ್ಡಮನಿ, ಪ್ರವೀಣ ಯರಗಟ್ಟಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.
Kshetra Samachara
06/01/2025 06:20 pm