ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜನತೆಗೆ ಉತ್ತಮವಾದ ಚಿಕಿತ್ಸೆ ಸಿಗಲೆಂದು, ಹುಬ್ಬಳ್ಳಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ನಿರ್ಮಾಣ ಮಾಡ್ತಿದ್ದಾರೆ. ವೇಗವಾಗಿ ನಡೆಯಬೇಕಾದ ಆಸ್ಪತ್ರೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಇದೇ ರೀತಿ ಕಾಮಗಾರಿ ಮಾಡಿದ್ರೆ ಉತ್ತರ ಕರ್ನಾಟಕ ಭಾಗದ ಜನರಿಗೆ ಚಿಕಿತ್ಸೆ ಯಾವಾಗ ಸಿಗಬೇಕು...?
ಹೌದು,,,, ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ, ಹುಬ್ಬಳ್ಳಿಯ ಆನಂದ ನಗರದ ಜಯದೇವ ಹೃದ್ರೋಗ ಆಸ್ಪತ್ರೆಗೆ 2022 ರ ಬಜೆಟ್‌ನಲ್ಲಿ, 250 ಕೋಟಿ ಮೀಸಲಿಟ್ಟು ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಘೋಷಣೆ ಮಾಡಿದ್ರು. ವಿಶೇಷ ಅಂದ್ರೆ ಈ ಆಸ್ಪತ್ರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಿದ್ದರು. 2023 ಮಾರ್ಚ್ 12 ರಂದು ಆಸ್ಪತ್ರೆಯ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿ ಎರಡು ವರ್ಷಗಳೇ ಕಳೆದ್ರೂ ಕೂಡ, ಜಯದೇವ ಹೃದ್ರೋಗ ಆಸ್ಪತ್ರೆ ಜನರಿಗೆ ತಲುಪಲು ವಿಳಂಬವಾಗುತ್ತಿರೋದಾದ್ರು ಯಾಕೆ..? 437 ಹಾಸಿಗೆಯುಳ್ಳ ಜಯದೇವ ಹೃದ್ರೋಗ ಆಸ್ಪತ್ರೆಗೆ 250 ಕೋಟಿ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆಯನ್ನು ನಿರ್ಮಾಣ ಮಾಡುತ್ತಿದ್ದಾರೆ.
ಬೆಂಗಳೂರು ಮಾದರಿಯಲ್ಲೇ ನಿರ್ಮಾಣವಾಗುತ್ತಿರೋ ಜಯದೇವ ಆಸ್ಪತ್ರೆ, ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದ್ರೂ ಉತ್ತರ ಕರ್ನಾಟಕದ ಜನರಿಗೆ ಚಿಕಿತ್ಸೆ ದೊರೆಯುತ್ತಿಲ್ಲ. ಇನ್ನು ನಿಯಮಗಳ ಪ್ರಕಾರ ಮೂವತ್ತು ತಿಂಗಳಲ್ಲಿಯೇ ಕಾಮಗಾರಿ ಮುಗಿದು ಹೃದ್ರೋಗ ಸಮಸ್ಯೆ ಇದ್ದವರಿಗೆ ಚಿಕಿತ್ಸೆ ಸಿಗಬೇಕಿತ್ತು. ಆಮೆಗತಿಯಲ್ಲಿ ಸಾಗಿದ ಆಸ್ಪತ್ರೆಯ ಕಾಮಗಾರಿ, ಇದೇ ರೀತಿ ಕಾಮಗಾರಿ ಮಾಡಿದ್ರೆ ಉತ್ತರ ಕರ್ನಾಟಕ ಭಾಗದ ಜನರಿಗೆ ಚಿಕಿತ್ಸೆ ಯಾವಾಗ ಸಿಗಬೇಕು...? ಆದಷ್ಟು ಬೇಗನೆ ಕಾಮಗಾರಿ ಸಂಪೂರ್ಣ ಮಾಡಿ, ಹೃದ್ರೋಗಿಗಳಿಗೆ ಚಿಕಿತ್ಸೆ ಸಿಗುವಂತಾಗಲಿ ಎಂದು ಉತ್ತರ ಕರ್ನಾಟಕದ ಮಂದಿ ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದಾರೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
06/01/2025 01:37 pm