2024ಕ್ಕೆ ಗುಡ್ ಬೈ ಹೇಳಿ 2025ಕ್ಕೆ ಹಾಯ್ ಹೇಳಲು ಕ್ಷಣಗಣನೆ ಶುರುವಾಗಿದೆ. ಈ ಮಧ್ಯೆ ಇಂದಿರಾನಗರ ಎಂ.ಜಿ ರೋಡ್ ಪಬ್ ಅಲ್ಲಿ ಕುಡಿದು ಮೆಟ್ರೋ ಹತ್ತೋ ಮುನ್ನ ಈ ಬಾರಿ ಹುಷಾರಾಗಿರೋದು ಅತೀ ಅವಶ್ಯ ಅಂತಿದ್ದಾರೆ. ನಮ್ಮ ಮೆಟ್ರೋ ಸಿಬ್ಬಂದಿ. ನಮ್ಮ ಮೆಟ್ರೋದಲ್ಲಿ ಎಣ್ಣೆ ಏಟಲ್ಲಿ ಅವಾಂತರ ಮಾಡಿದ್ರೆ ಕಠಿಣ ಕ್ರಮದ ಎಚ್ಚರಿಕೆ ಕೊಡಲಾಗಿದೆ.
ಮತ್ತೇರಿಸಿಕೊಂಡು ಮತಿ ಕಳೆದು ಕೊಂಡವರ ಹಾಗೇ ವರ್ತಿಸಿದರೆ ನಮ್ಮ ಮೆಟ್ರೋ ಸಿಬ್ಬಂದಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ. ಮೆಟ್ರೋ ಸ್ಟೇಷನ್ ಒಳಗೆ ಬರುವ ಮುನ್ನವೇ ಪ್ರತ್ಯೇಕ ಟೀಂ ಬರುವಂತಹ ಪ್ರಯಾಣಿಕರ ಪರಿಶೀಲನೆ ಕೂಡ ಮಾಡುತ್ತೆ. ಇನ್ನು ಬಿಎಂಟಿಸಿ ಕೂಡ ತಡರಾತ್ರಿ 2 ಗಂಟೆಯವರೆಗೂ ಕೂಡ ಕಾರ್ಯ ನಿರ್ವಹಿಸುತ್ತೆ.
PublicNext
31/12/2024 07:32 pm