ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: FIR ಹಿಂದೆ ತಗೋ… ಇಲ್ಲಾ ಅಂದ್ರೆ ನಿನ್ನನ್ನೂ ಬಿಡಲ್ಲ…, ಗುಂಡೇಟು ತಿಂದ ಮುಜಾಮೀಲ್ ಆಡಿಯೋ ವೈರಲ್

ಹುಬ್ಬಳ್ಳಿ:ಹುಬ್ಬಳ್ಳಿಯ ಘೋಡಕೆ ಫ್ಲ್ಯಾಟ್ ನಲ್ಲಿ ತಂದೆ ಹಾಗೂ ಮಗನ ಮೇಲೆ ಚಾಕು ಇರಿದಿದ್ದ ಆರೋಪಿ ಮುಜಾಮೀಲ್ ಫೋನ್ ಮಾಡಿ ಸಂಬಂಧಿಕರಿಗೆ ಧಮ್ಕಿ ಹಾಕಿದ ಆಡಿಯೋ ಪಬ್ಲಿಕ್ ನೆಕ್ಸ್ಟ್ ಗೆ ಲಭ್ಯವಾಗಿದೆ.

ಆರೋಪಿ ಮುಜಾಮೀಲ್ ಸೋಮವಾರ ರಾತ್ರಿ ಸಮೀರ್ ಹಾಗೂ ಜಾವೇದ್ ಎಂಬುವರಿಗೆ ಸಿಕ್ಕ ಸಿಕ್ಕಲ್ಲಿ ಚಾಕುವಿನಿಂದ ಇರಿದಿದ್ದ. ನಂತರ ಅಲ್ಲಿಂದ ಪರಾರಿಯಾಗಿದ್ದ. ಇತ್ತ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಂದೆ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ದೂರು ಕೊಡಲು ಹೋಗಿದ್ದಾರೆ.

ಈ ಮಾಹಿತಿ ಗೊತ್ತಾಗುತ್ತಿದ್ದ ಹಾಗೆ ಆರೋಪಿ ಮುಜಾಮೀಲ್ ಸಮೀರ್ ಹಾಗೂ ಜಾವೇದ್ ಅವರ ಸಂಬಂಧಿಕರಿಗೆ ಫೋನ್ ಮಾಡಿ ನನ್ನಿಂದ ತಪ್ಪಾಗಿದೆ. ಪೊಲೀಸ್ ಕಂಪ್ಲೇಟ್ ಕೊಡಬೇಡ. ಅದನ್ನು ಹಿಂದೆ ತಗೋ. ಒಂದು ವೇಳೆ ತಗೊಳ್ದೇ ಹೋದ್ರೆ ನಿನ್ನ ಕೂಡ ಬಿಡಲ್ಲ ಅಂತಾ ಧಮ್ಕಿ ಹಾಕಿದ್ದಾನೆ.

ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಇದೀಗ ಆರೋಪಿ ಮುಜಾಮೀಲ್ ನ ಕಾಲಿಗೆ ಗುಂಡೇಟು ನೀಡಿ ಬಂಧನ ಮಾಡಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಈ ಇಬ್ಬರ ನಡುವಿನ ಸಂಬಾಷಣೆಯ ಆಡಿಯೋ ವೈರಲ್ ಆಗುತ್ತಿದೆ.

ವಿನಯ ರೆಡ್ಡಿ, ಕ್ರೈಂ ಬ್ಯುರೋ, ಪಬ್ಲಿಕ್ ನೆಕ್ಸ್ಟ್

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

31/12/2024 05:48 pm

Cinque Terre

160.54 K

Cinque Terre

3

ಸಂಬಂಧಿತ ಸುದ್ದಿ