ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪರಸಂಗದ ಗಂಡನಿಂದ ಪತ್ನಿಗೆ ಟಾರ್ಚರ್ - ಹಿಡಿದು ಜೈಲಿಗಟ್ಟಿದ ಅಶೋಕನಗರ ಪೊಲೀಸರು

ಹುಬ್ಬಳ್ಳಿ: ಪ್ಲೇ ಬಾಯ್ ಅಂತಾನೆ ಹೆಸರುವಾಸಿಯಾಗಿದ್ದ ಸಾಯಿನಾಥ ಪವಾರ್ ಪರಸ್ತ್ರೀಯರ ಆಸೆಗೆ ಬಿದ್ದು ತಾನು ಹೆತ್ತ ಮಕ್ಕಳಿಗೆ, ತಾಳಿ ಕಟ್ಟಿದ ಹೆಂಡತಿಗೆ ಮೋಸ ಮಾಡಿದ್ದ. ಗರ್ಲ್ ಫ್ರೆಂಡ್ಸ್ ಸಲುವಾಗಿ ಸಾಯಿನಾಥ ತನ್ನ ಹೆಂಡತಿಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದ. ಮನನೊಂದ ಆತನ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಸುದ್ದಿಯನ್ನು ಬಿತ್ತರಿಸಿತ್ತು. ಸುದ್ದಿ ಬಂದ ಕೂಡಲೇ ಸಾಯಿನಾಥ್ ಎಸ್ಕೇಪ್ ಆಗಿದ್ದ. ಅಶೋಕ ನಗರ ಪೊಲೀಸರ ಕಾರ್ಯಾಚರಣೆಯಿಂದ ಪ್ಲೇ ಬಾಯ್ ಈಗ ಅಂದರ್ ಆಗಿದ್ದಾನೆ.

ಹುಬ್ಬಳ್ಳಿಯ ಅಧ್ಯಾಪಕ ನಗರದ ನಿವಾಸಿ ಸಾಯಿನಾಥ್ ಪವಾರ್, ಕಳೆದ 17 ವರ್ಷದ ಹಿಂದೆ ನಿಖಿತಾ ಎಂಬಾಕೆಯನ್ನ ಮದುವೆ ಆಗಿದ್ದ. ಅಲ್ದೇ ಈತನಿಗೆ ಮುದ್ದಾದ ಮೂರು ಮಕ್ಕಳಿದ್ದರು. ಮಕ್ಕಳ ಜೊತೆ ನೆಮ್ಮದಿಯಿಂದ ಇರಬೇಕಾಗಿದ್ದ ಈ ಕೀಚಕ ಕಾಮುಕ ಬೇರೆ ಬೇರೆ ಹೆಸರಲ್ಲಿ ಫೇಸ್‌ ಬುಕ್, ಇನ್‌ಸ್ಟಾಗ್ರಾಂ ಖಾತೆ ತೆಗೆದು ಈ ಮೂಲಕ ಚಾಟ್ ಮಾಡಿ ಹುಡುಗಿಯರನ್ನ ಮರಳು ಮಾಡಿ ಬಲೆಗೆ ಬೀಳಿಸಿಕೊಂಡು ಚುಮುಚುಮು ಚಕ್ಕಂದ ಆಡೋದನ್ನೇ ಕಸಬು‌ ಮಾಡಿಕೊಂಡಿದ್ದ.‌ ಆದ್ರೆ ಈ ಕಳ್ಳ‌ ಆಸಾಮಿಯ ನಡುವಳಿಕೆ ಬಗ್ಗೆ ಅದ್ಯಾವಾಗ ತನ್ನ‌ ಹೆಂಡತಿಗೆ ನಿಖಿತಾಗೆ ಗೊತ್ತಾಯಿತೋ ಆಗಲೇ ನೋಡಿ‌, ಈ ಕಾಮ ಪಿಶಾಚಿಯ ‌‌ನಿಜವಾದ ಮುಖವಾಡ ಬಯಲಾಗಿದೆ. ತನ್ನ ಹುಳುಕು ಗೊತ್ತಾಗಿದ್ದೇ ತಡ ಅದನ್ನ ಪ್ರಶ್ನೆ ಮಾಡಿದ ಹೆಂಡತಿಗೆ ನಿತ್ಯವೂ ಕಿರುಕುಳ ನೀಡೋದು, ಹಲ್ಲೆ ಮಾಡೋದು ಅಲ್ದೇ ತಾನು ಜೀವ ನೀಡಿದ ಮಕ್ಕಳಿಗೂ ಸಹ ಊಟ ಹಾಕದೇ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದ. ಇದಕ್ಕೆ ಮನನೊಂದ ಆತನ ಹೆಂಡತಿ ನಿಖಿತಾ ಪೊಲೀಸ್ ದೂರು ನೀಡಿದ್ದಳು. ಅಷ್ಟೇ ಅಲ್ದೆ ಪಬ್ಲಿಕ್ ನೆಕ್ಸ್ಟ್ ಮೂಲಕ ತನ್ನ ಅಳಲನ್ನು ತೋಡಿಕೊಂಡಿದ್ದಳು. ವರದಿ ಮಾಡಿದ್ದೇ ತಡ ಸಾಯಿನಾಥ್ ಪೊಲೀಸರಿಂದ ತಲೆಮರೆಸಿಕೊಂಡಿದ್ದ. ಆದ್ರೆ ಅಶೋಕ ನಗರ ಪೊಲೀಸರು ಆತನನ್ನು ಅರೆಸ್ಟ್ ಮಾಡಿ ಕಂಬಿ ಹಿಂದೆ ತಳ್ಳಿದ್ದಾರೆ. ಇಂತಹವರಿಗೆ ಪೊಲೀಸರು ತಕ್ಕ ಶಿಕ್ಷೆ ನೀಡಿ ನೊಂದ ಹೆಂಡತಿಗೆ ನ್ಯಾಯ ದೊರಕಿಸಬೇಕಿದೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ,ಹುಬ್ಬಳ್ಳಿ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/01/2025 10:32 pm

Cinque Terre

152.56 K

Cinque Terre

17

ಸಂಬಂಧಿತ ಸುದ್ದಿ