ಹುಬ್ಬಳ್ಳಿ : ಜನರಿಗೆ ದುಪ್ಪಟ್ಟು ಹಣದ ಆಸೆಯನ್ನು ತೋರಿಸಿ ಮಕ್ಮಲ್ ಟೋಫಿ ಹಾಕಿ ವಂಚಿಸುವ ಜಾಲ ಈಗ ಸಾಕಷ್ಟು ಸಕ್ರಿಯವಾಗಿದೆ. ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿ ಹಣ ಗಳಿಸಬಹುದು ಎಂದು ಹೇಳಿ ನೀಲಕಂಠಪ್ಪ ಎಂಬುವರಿಗೆ 4.61 ಲಕ್ಷ ರೂ. ವಂಚಿಸಿದ ಪ್ರಕರಣ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಫೇಸ್‌ಬುಕ್‌ನಲ್ಲಿ ಬ್ಲಾಕ್ ಸ್ಟೋನ್ ಸೆಕ್ಯುರಿಟ್ ಗ್ರೂಪ್ ಲಿಂಕ್ ಮೂಲಕ ಪರಿಚಯವಾದ ವ್ಯಕ್ತಿ, ವಾಟ್ಸ್ ಆಪ್ ಗ್ರೂಪ್‌ವೊಂದಕ್ಕೆ ಸೇರಿದ್ದಾರೆ. ಆನ್‌ಲೈನ್‌ನಲ್ಲಿ ಟ್ರೇಡಿಂಗ್ ಮೂಲಕ ಹಣ ಗಳಿಸಬಹುದು ಎಂದು ನಂಬಿಸಿ ಅವರ ಖಾತೆಯಿಂದ 3.61 ಲಕ್ಷ ಹಾಗೂ ಅವರ ಪತ್ನಿ ಖಾತೆಯಿಂದ 1 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Kshetra Samachara
04/01/2025 11:49 am