ಕುಂದಗೋಳ : ಕುಂದಗೋಳ ತಾಲೂಕಿನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕುಂದಗೋಳ ತಾಲೂಕಿನ ವಿವಿಧ ಭಾಗಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
ಹೌದು ! ಇತ್ತಿಚಿಗೆ ಕುಂದಗೋಳ ತಾಲೂಕಿನ ಚಿಕ್ಕಗುಂಜಳ, ಪಶುಪತಿಹಾಳ, ಯರೇಬೂದಿಹಾಳ, ಹರ್ಲಾಪೂರ ಗ್ರಾಮಗಳ ಜಮೀನುಗಳ ಹೊರವಲಯದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬ ವಿಷಯ ಎಲ್ಲೆಡೆ ಚರ್ಚೆ ಆಗುತ್ತಿತ್ತು.
ಈ ವಿಷಯಕ್ಕೆ ಸಂಬಂಧಿಸಿದಂತೆ ಚಿರತೆ ವಿಡಿಯೋ, ಫೋಟೋ ವೈರಲ್ ಆಗಿ ರೈತಾಪಿ ಜನ, ಕುರಿಗಾಹಿಗಳು ಸೇರಿದಂತೆ ವಾಹನ ಸಾರ್ವಜನಿಕರು ಭಯದಲ್ಲೇ ಇದ್ದರು.
ಇದೀಗ ಆರಣ್ಯ ಇಲಾಖೆ ಅಧಿಕಾರಿಗಳು ಕುಂದಗೋಳ ತಾಲೂಕಿನಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬ ಹಳ್ಳಿಗಳಲ್ಲಿ ಪರಿಶೀಲನೆ ನಡೆಸಿ ಚಿರತೆ ಬಂದಿದೆ ಎಂಬುದಕ್ಕೆ ಸೂಕ್ತ ಮಾಹಿತಿ ದೊರೆತಿಲ್ಲಾ ಎಂದಿದ್ದಾರೆ.
ಈಗಾಗಲೇ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಕೆಲಸ ಮಾಡಿದ್ದಾರೆ, ಪರಿಸ್ಥಿತಿ ಹೀಗಿದ್ದರೂ ಸಹ ಸೋಶಿಯಲ್ ಮೀಡಿಯಾದಲ್ಲಿ ಇಂದಿಗೂ ಊರಿಂದ ಊರಿಗೆ ಚಿರತೆ ಬಂದಿದೆ ಎಂಬ ನಾನಾ ವಿಡಿಯೋ ಶೇರ್ ಆಗುತ್ತಲಿದ್ದರೇ ಕೆಲ ವಾಹನ ಸವಾರರು, ರೈತರು ಚಿರತೆ ನೋಡಿದ್ದೇವೆ ಎಂಬ ಅಭಿಪ್ರಾಯ ತಿಳಿಸಿದ್ದಾರೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
06/01/2025 01:13 pm