ನವಲಗುಂದ: ಪಟ್ಟಣದ ಎಪಿಎಂಸಿ ಆವರಣದ ಒಳಭಾಗದಲ್ಲಿ ಮಣ್ಣಿನಲ್ಲಿ ಹೂತಿಟ್ಟ ಅನ್ನಭಾಗ್ಯ ಯೋಜನೆಯ ಎರಡು ಚೀಲ ತೊಗರಿ ಬೇಳೆ ಪೊಟ್ಟಣಗಳು ಸಿಕ್ಕಿವೆ.
ದನ ಕರುಗಳನ್ನು ಮೇಯಿಸಲು ಇರುವ ಜಾಗದಲ್ಲಿ ಪೊಟ್ಟಣದ ಮೇಲ್ಭಾಗ ಕಂಡಿದ್ದನ್ನು ಗಮನಿಸಿ ಮಣ್ಣು ಸರಿಸಿದಾಗ, ಚೀಲಗಳು ಸಿಕ್ಕಿದ್ದು ಪೊಟ್ಟಣದ ಮೇಲೆ ಕರ್ನಾಟಕ ಸರ್ಕಾರ, ಅನ್ನಭಾಗ್ಯದ ಹಸಿವು ಮುಕ್ತ ಕರ್ನಾಟಕ, ತೊಗರಿ ಬೇಳೆ ಎಂದು ಮುದ್ರಿತವಾಗಿದೆ.
ಇನ್ನೂ ಪ್ರಸ್ತುತ ಅನ್ನಭಾಗ್ಯ ಯೋಜನೆಯಡಿ ತೊಗರಿ ಬೇಳೆ ಪೊಟ್ಟಣ ಈಗ ವಿತರಿಸುತ್ತಿಲ್ಲ. ಆದರೆ ಈ ಚೀಲಗಳು ಯಾವಗಿನವೋ ಎಂಬುದು ಮಾತ್ರ ತಿಳಿಯುತ್ತಿಲ್ಲ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗ್ರಾಮ ಆಡಳಿತಾಧಿಕಾರಿ ಎಚ್.ವಿ. ಚಿಕ್ಕನರಗುಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಫ್‌ಡಿಎ ಪ್ರಕಾಶ ಮೇಲಿನಮನಿ ಮತ್ತು ಇಬ್ಬರು ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ನೀಡುವುದಾಗಿ ತಿಳಿಸಿದರು.
- ಶಂಕರ ಸುಭೇದಾರಮಠ, ಪಬ್ಲಿಕ್ ನೆಕ್ಸ್ಟ್ ನವಲಗುಂದ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
31/12/2024 10:57 pm