ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹೊಸ ವರ್ಷಕ್ಕೆ ಸಾರ್ವಜನಿಕ ಬೈಸಿಕಲ್ ಸಿಸ್ಟಮ್‌ನಿಂದ ಗಿಫ್ಟ್ - ಒಂದು ಗಂಟೆ ಉಚಿತ ಸವಾರಿಗೆ ಅವಕಾಶ

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅವಳಿನಗರದ ಜನರಿಗೆ ಬೈಸಿಕಲ್ ಸೇವೆ ಒದಗಿಸುವ ನಿಟ್ಟಿನಲ್ಲಿ ಪಿಬಿಎಸ್(ಸಾರ್ವಜನಿಕ ಬೈಸಿಕಲ್ ಸಿಸ್ಟಮ್) ಜಾರಿಗೊಳಿಸಲಾಗಿತ್ತು. ಬಳಕೆದಾರರು ಇಲ್ಲದೇ ಪಿಬಿಎಸ್ ಯೋಜನೆ ಧೂಳು ಹಿಡಿದಿತ್ತು. ಈಗ ಹೊಸ ವರ್ಷಕ್ಕೆ ಹೊಸ ಕಾರ್ಯದ ಮೂಲಕ ಸಾರ್ವಜನಿಕ ಬೈಸಿಕಲ್ ಸಿಸ್ಟಮ್ ಉತ್ತೇಜನಕ್ಕೆ ನಿರ್ಧಾರ ಮಾಡಲಾಗಿದೆ.

ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರಿಗೆ ಉಚಿತವಾಗಿ ದೈನಂದಿನ ಸಂಚಾರದೊಂದಿಗೆ ಸೈಕ್ಲಿಂಗ್ ಬೇಡಿಕೆ ಹೆಚ್ಚಿಸಲು ಪ್ಲ್ಯಾನ್ ಮಾಡಲಾಗಿದೆ. ಹೌದು..ಟ್ರಿನಿಟಿ ಟೆಕ್ನಾಲಜಿಸ್ ಆ್ಯಂಡ್ ಸಾಫ್ಟ್‌ವೇರ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಪಿಬಿಎಸ್‌ಗೆ ಹೊಸ ಆಯಾಮವನ್ನು ನೀಡಲು ಮುಂದಾಗಿದೆ. ಹೊಸ ವರ್ಷಕ್ಕೆ ಅಂದರೆ ಜನವರಿ-1 2025ರಿಂದ ಸೈಕಲ್ ಬಳಕೆದಾರರಿಗೆ ಮೊದಲ ಒಂದು ಗಂಟೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದು, ಈ ನಿರ್ಧಾರ ಜನವರಿ 01ರಿಂದ ಜಾರಿಯಾಗಲಿದೆ. ಸೈಕ್ಲಿಂಗ್ ಅನ್ನು ಸಕ್ರಿಯವಾಗಿ ಉತ್ತೇಜಿಸುವ ನಿಟ್ಟಿನಲ್ಲಿ ಸಾರ್ವಜನಿಕ ಬೈಸಿಕಲ್ ಸಿಸ್ಟಮ್ ಬಳಕೆದಾರರಿಗೆ ಹೊಸ ವರ್ಷಕ್ಕೆ ಹೊಸ ಕೊಡುಗೆ ನೀಡಲು ನಿರ್ಧಾರ ಮಾಡಲಾಗಿದ್ದು, ಪ್ರತಿದಿನ ಒಂದು ಗಂಟೆಯ ಉಚಿತ ಪ್ರಯಾಣವನ್ನು ಬಳಕೆದಾರರು ಆನಂದಿಸಬಹುದಾಗಿದೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ಸೆಪ್ಟೆಂಬರ್ 2022 ರಲ್ಲಿ ಉದ್ಘಾಟನೆಗೊಂಡ ಪಿಬಿಎಸ್, ಉತ್ತರ ಕರ್ನಾಟಕದ ಪ್ರವರ್ತಕ ಬೈಸಿಕಲ್ ಹಂಚಿಕೆ ವ್ಯವಸ್ಥೆಯಾಗಿದೆ. ನಗರದ ವಿವಿಧ ಸ್ಥಳಗಳಲ್ಲಿ 34 ಡಾಕಿಂಗ್ ಸ್ಟೇಷನ್‌ಗಳನ್ನು ಹೊಂದಿದ್ದು, 340 ಬೈಸಿಕಲ್‌ಗಳನ್ನು ಹೊಂದಿದೆ. ಇದರಲ್ಲಿ ಹಲವಾರು ಎಲೆಕ್ಟ್ರಿಕ್ ಮಾದರಿಗಳು ಸೇರಿದಂತೆ ಒಟ್ಟು ರೂ 8.50 ಕೋಟಿ ಹೂಡಿಕೆಯಾಗಿದೆ. ಆದರೆ ಸಮರ್ಪಕವಾಗಿ ಬಳಕೆಯಾಗದ ಹಿನ್ನೆಲೆಯಲ್ಲಿ ಈಗ ಹೊಸ ವರ್ಷದ ಆಚರಣೆಯಲ್ಲಿ ಬೈಸಿಕಲ್ ಬಳಕೆದಾರರಿಗೆ ಮೊದಲ ಒಂದು ಗಂಟೆಯ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಲಾಗಿದೆ.

ಒಟ್ಟಿನಲ್ಲಿ ಟ್ರಿನಿಟಿ ಟೆಕ್ನಾಲಜೀಸ್ ಆ್ಯಂಡ್ ಸಾಫ್ಟ್‌ವೇರ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು‌ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದು, ಹೊಸ ವರ್ಷಕ್ಕೆ ಹೊಸ ಪ್ರಯತ್ನದೊಂದಿಗೆ ಜನರ ಬಳಕೆಗೆ ಮುಕ್ತವಾಗಲಿದೆ.

ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Shivu K
Kshetra Samachara

Kshetra Samachara

31/12/2024 08:28 pm

Cinque Terre

152.15 K

Cinque Terre

2

ಸಂಬಂಧಿತ ಸುದ್ದಿ