ಧಾರವಾಡ: ಇಂದು ಧಾರವಾಡದಾದ್ಯಂತ 2025ನೇ ವರ್ಷಕ್ಕೆ ಅದ್ಧೂರಿ ಸ್ವಾಗತ ಕೋರಲಾಗುತ್ತಿದೆ.
ಮಂಗಳವಾರ ರಾತ್ರಿ ಧಾರವಾಡದ ವಿವಿಧ ಹೋಟೆಲ್ ಹಾಗೂ ರೆಸಾರ್ಟ್‌ಗಳಲ್ಲಿ ನ್ಯೂ ಇಯರ್ ಪಾರ್ಟಿ ಜೋರಾಗಿಯೇ ನಡೆಯುತ್ತಿದೆ. ಅಲ್ಲದೇ ಸ್ನೇಹಿತರ ಬಳಗವೆಲ್ಲ ಸೇರಿ ಪಾರ್ಟಿ ಮಾಡಿ ಕೇಕ್ ಕತ್ತರಿಸಿ ಹೊಸ ವರ್ಷಕ್ಕೆ ಸ್ವಾಗತ ಕೋರುತ್ತಿದ್ದಾರೆ.
ನ್ಯೂ ಇಯರ್ ಹಿನ್ನೆಲೆಯಲ್ಲಿ ಧಾರವಾಡದ ಅನೇಕ ಬೇಕರಿಗಳಲ್ಲಿ ತಹರೇವಾರಿ ಕೇಕ್‌ಗಳು ಸಿದ್ಧಗೊಂಡಿವೆ. ಚಾಕಲೇಟ್, ಸ್ಟ್ರಾಬೆರಿ, ಬ್ಲ್ಯಾಕ್ ಫಾರೆಸ್ಟ್, ಆರೆಂಜ್, ಮ್ಯಾಂಗೋ ಸೇರಿದಂತೆ ಇತರ ಫ್ಲೆವರ್‌ಗಳ ಸುಮಾರು 50ಕ್ಕೂ ಹೆಚ್ಚು ಬಗೆಯ ಕೇಕ್‌ಗಳು ಸಿದ್ಧಗೊಂಡಿದ್ದು, ಕೇಕ್ ಖರೀದಿಸಲು ಜನ ಮುಗಿಬಿದ್ದಿದ್ದಾರೆ.
Kshetra Samachara
31/12/2024 09:46 pm