ಹುಬ್ಬಳ್ಳಿ: ಹೊಸ ವರ್ಷ ಅಂಗವಾಗಿ, ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮೀಷನರೇಟ್‌ನಿಂದ, ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಮಾದಕ ದ್ರವ್ಯಗಳ ಸೇವನೆ ಮಾಡುವವರನ್ನು ಕರೆದು ಪರೇಡ್ ಮಾಡಿದ್ದಾರೆ. ಈ ವೇಳೆ ಯುವಕನ ಜೇಬಿನಲ್ಲಿದ್ದ ತಂಬಾಕನ್ನು ತೆಗೆದು ಎಸೆದಿದ್ದಾರೆ.
ಪರೇಡ್ ಮಾಡುವ ವೇಳೆ ಯುವಕನನ್ನ ಕರೆದ ಕಮಿಷನರ್ ಆತನ ಜೇಬು ಚೆಕ್ ಮಾಡಿದ್ದಾರೆ. ಆತ ಜೇಬಲ್ಲಿ ತಂಬಾಕು ಇರುವುದು ಗೊತ್ತಾಗಿದೆ. ಹೇಗೆ ತಿನ್ನೋದು ತೋರಿಸು ಎಂದ ಕಮಿಷನರ್ ಹೇಳಿದ್ದೇ ತಡ ಅವರ ಎದುರೇ ತಂಬಾಕು ಬಾಯಲ್ಲಿಟ್ಟು ತೋರಿಸಿದ್ದಾನೆ. ಇದೇನು ಔಷಧಿನಾ ಎಂದು ಯುವಕನಿಗೆ ಕಮಿಷ್ನರ್ ಪ್ರಶ್ನೆ ಮಾಡಿ, ಕೊನೆಗೆ ತಂಬಾಕು ಉಗುಳು ಎಂದು ಗದರಿಸಿ, ಮತ್ತೆ ತಂಬಾಕು ತಿನ್ನದಂತೆ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/12/2024 03:00 pm