ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹೊಸ ವರ್ಷಾಚರಣೆ - ಧಾರವಾಡದಾದ್ಯಂತ ಪೊಲೀಸ್ ಕಣ್ಗಾವಲು

ಧಾರವಾಡ: ಇಂದು ರಾತ್ರಿ ಧಾರವಾಡದಾದ್ಯಂತ ಹೊಸ ವರ್ಷಾಚರಣೆಯ ಸಂಭ್ರಮ ಮನೆ ಮಾಡಲಿದೆ. ಧಾರವಾಡದ ವಿವಿಧ ಹೋಟೆಲ್ ಹಾಗೂ ರೆಸಾರ್ಟ್‌ಗಳಲ್ಲಿ ಪಾರ್ಟಿ ನಡೆಯಲಿವೆ.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಧಾರವಾಡದ ಸುಭಾಷ ರಸ್ತೆ, ಟಿಕಾರೆ ರಸ್ತೆ, ಬೆಳಗಾವಿ ರಸ್ತೆ, ಹುಬ್ಬಳ್ಳಿ ರಸ್ತೆ, ಕೆಸಿಡಿ ರಸ್ತೆ, ಜಯನಗರ, ಶ್ರೀನಗರ, ಸಪ್ತಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಜನಜಂಗುಳಿ ಸೇರಲಿದ್ದು, ಅಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.

ಇದಕ್ಕೂ ಮೊದಲು ಧಾರವಾಡದ ಕಡಪಾ ಮೈದಾನದಲ್ಲಿ ಎಸಿಪಿ ಪ್ರಶಾಂತ ಸಿದ್ಧನಗೌಡರ ಅವರು ಪೊಲೀಸ್ ಸಿಬ್ಬಂದಿಗೆ ಕೆಲವೊಂದಿಷ್ಟು ಸಲಹೆ, ಸೂಚನೆಗಳನ್ನು ನೀಡಿದರು. ಇನ್‌ಸ್ಪೆಕ್ಟರ್‌ಗಳಾದ ದಯಾನಂದ, ಸಂಗಮೇಶ ದಿಡ್ಡಿಗನಾಳ, ಕಾಡದೇವರಮಠ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು.

Edited By : Shivu K
Kshetra Samachara

Kshetra Samachara

31/12/2024 07:33 pm

Cinque Terre

66.88 K

Cinque Terre

1

ಸಂಬಂಧಿತ ಸುದ್ದಿ