ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ಸೆಳೆದಿದ್ದ ಮೋಹಕ ಸ್ಪರ್ಧಿ ಐಶ್ವರ್ಯ ಸಿಂದೋಗಿ ಈ ವಾರದ ದೊಡ್ಮನೆಯಿಂದ ಔಟ್ ಆಗಿದ್ದಾರೆ.
ಕನ್ನಡ ಸಿನಿಮಾ ಸೇರಿದಂತೆ ಕಿರುತೆರೆಯಲ್ಲೂ ಮಿಂಚಿದ್ದ ನಟಿ ಐಶ್ವರ್ಯ ಸಿಂದೋಗಿ ತಕ್ಕಮಟ್ಟಿಗೆ ಖ್ಯಾತಿ ಹೊಂದಿದ್ದಾರೆ. ಬಿಗ್ ಬಾಸ್ ಮನೆ ಪ್ರವೇಶಿಸಿದ್ದ ಅವರು, ಅಲ್ಲಿನ ಟಾಸ್ಕ್‌ಗಳಲ್ಲಿ ಅಷ್ಟಾಗಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿರಲಿಲ್ಲ. ಸದಾ ಶಿಶಿರ್ ಅವರ ಜೊತೆ ಹೆಚ್ಚು ಓಡಾಡಿಕೊಂಡಿರುತ್ತಾರೆ ಎನ್ನಲಾಗುತ್ತಿತ್ತು. ಮನೆಯಲ್ಲಿ ಈಕೆ ಅಷ್ಟೊಂದು ಎಂಟರ್‌ಟೈನ್ ಮಾಡುತ್ತಿರಲಿಲ್ಲ ಎಂಬ ಅಭಿಪ್ರಾಯ ಬಿಗ್ ಬಾಸ್ ವೀಕ್ಷಕರಲ್ಲಿ ಇತ್ತು. ಸದ್ಯ ಐಶ್ವರ್ಯ ಸಿಂದೋಗಿ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ.
PublicNext
28/12/2024 10:00 pm