ಮೈಸೂರು: ಚಾಮುಂಡಿ ಬೆಟ್ಟಕ್ಕೆ ಕಿಚ್ಚ ಸುದೀಪ ಭೇಟಿ ನೀಡಿ ಚಾಮುಂಡೇಶ್ವರಿ ಅಮ್ಮನ ದರ್ಶನ ಪಡೆದಿದ್ದಾರೆ. ಮ್ಯಾಕ್ಸ್ ಚಿತ್ರ ಯಶಸ್ಸಿನ ಅಲೆಯಲ್ಲಿರೋ ಕಿಚ್ಚ, ಪ್ರತಿ ವರ್ಷದಂತೆ ಈ ವರ್ಷವೂ ನಾಡದೇವಿ ದರ್ಶನ ಮಾಡಿದ್ದಾರೆ.
ಕಿಚ್ಚನಿಗೆ ಸ್ಥಳೀಯ ಮುಖಂಡರು ಹಾಗೂ ಪ್ರಮುಖರ ಸಾಥ್ ನೀಡಿದ್ದು, ಕಿಚ್ಚನನ್ನ ನೋಡಲು ದೇಗುಲದ ಹೊರಗೆ ಅಭಿಮಾನಿಗಳ ದಂಡು ನೆರೆದಿತ್ತು. ಈ ವೇಳೆ ಕಾರಿನ ಮೇಲೇರಿ ಅಭಿಮಾನಿಗಳನ್ನ ಕಂಡು ಕಿಚ್ಚ ಕೈ ಬೀಸಿದರು.
PublicNext
29/12/2024 12:02 pm