ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಖರ್ಗೆ ತಳ್ಳಿದ ಡಿಕೆಶಿ' : 'ಅಧ್ಯಕ್ಷರಾದರೇನು..? ದಲಿತನೆಂಬ ಕೀಳರಿಮೆಯೇ..? ವಿಡಿಯೋ ಹರಿಬಿಟ್ಟು ಬಿಜೆಪಿ ಟೀಕೆ

ಬೆಳಗಾವಿಯಲ್ಲಿ ನಡೆದ ಶತಮಾನೋತ್ಸವ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಸ್ವಾಗತಿಸುವ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ತಳ್ಳಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಬಿಜೆಪಿ, 'ಅಧ್ಯಕ್ಷರಾದರೇನು? ದಲಿತನೆಂಬ ಕೀಳರಿಮೆಯೇ ?’ ಎಂದು ಟೀಕಿಸಿದೆ.

ಎಕ್ಸ್‌ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಬಿಜೆಪಿ, ದಲಿತರು ಎಂದರೆ ಕಾಂಗ್ರೆಸ್‌ ಕಸಕ್ಕಿಂತಲೂ ಕೀಳಾಗಿ ನೋಡುತ್ತಲೇ ಇದೆ. ವೋಟ್‌ ಬ್ಯಾಂಕ್‌ಗಾಗಿ ದಲಿತರನ್ನು ದುರುಪಯೋಗ ಪಡಿಸಿಕೊಂಡು ಅವರನ್ನು ಸದಾಕಾಲವೂ ತುಳಿಯುತ್ತಿದೆ.

ಅಂದು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಂದ ಹಿಡಿದು ಇಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರವರೆಗೂ ಅವಮಾನ ಮಾಡುತ್ತಲೇ ಇದೆ. ಭ್ರಷ್ಟ ಸಿಎಂ ಸಿದ್ದರಾಮಯ್ಯ ಅವರ ದಲಿತ ವಿರೋಧಿ ನಡೆಯನ್ನು ಆ ದಿನಗಳ ಡಿ.ಕೆ.ಶಿವಕುಮಾರ್‌ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದೆ.

Edited By : Abhishek Kamoji
PublicNext

PublicNext

28/12/2024 08:07 am

Cinque Terre

136.11 K

Cinque Terre

10