ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹಗಲಲ್ಲೇ ಮನೆ ಕಳ್ಳತನ ಚಿನ್ನಾಭರಣ ಸೇರಿ, 3 ಲಕ್ಷ ಹಣ ದರೋಡೆ

ಕುಂದಗೋಳ : ಹಾಡಹಗಲೇ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಸೇರಿ 3 ಲಕ್ಷ ರೂಪಾಯಿ ನಗದು ಹಣ ದೋಚಿ ಪರಾರಿಯಾದ ಘಟನೆ ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ನಡೆದಿದೆ.

ಹೌದು ! ಡಿಸೆಂಬರ್ 22 ರಂದು ಹಾಡು ಹಗಲೇ ಮಧ್ಯಾಹ್ನ ಮಲ್ಲಪ್ಪ ಮೂಗಪ್ಪ ನರಗುಂದ ಎಂಬುವವರ ಮನೆ ಕೀಲಿ ಮುರಿದು ಒಳ ನುಗ್ಗಿದ ಕಳ್ಳರು ಟ್ರುಜರಿ ಬಾಗಿಲು ತೆರೆದು 35 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 5 ಗ್ರಾಂ ತೂಕದ ಚಿನ್ನದ ಕಿವಿ ಓಲೆ, 2 ಗ್ರಾಂ ತೂಕದ ಮಾಂಗಲ್ಯದ ಗುಂಡು, 3 ಲಕ್ಷ ರೂಪಾಯಿ ನಗದು ಹಣ ದೋಚಿ ಪರಾರಿಯಾಗಿದ್ದಾರೆ.

ಈ ಘಟನೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : PublicNext Desk
Kshetra Samachara

Kshetra Samachara

27/12/2024 03:45 pm

Cinque Terre

14.36 K

Cinque Terre

0

ಸಂಬಂಧಿತ ಸುದ್ದಿ