ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Exclusive: ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ಗ್ಯಾಂಗ್ ಹಾವಳಿ - ನಡು ರಸ್ತೆಯಲ್ಲೇ ಅಟ್ಟಹಾಸ.!

ಹುಬ್ಬಳ್ಳಿ: ಕ್ರಿಸ್ಮಸ್‌ ದಿನದಂದು ಪುಡಾರಿ ಗ್ಯಾಂಗ್‌ಗಳು ನಡು ರಸ್ತೆಯಲ್ಲಿ ಬೈಕ್ ಅಡ್ಡಗಟ್ಟಿ ಪುಂಡಾಟ ಮೆರೆದಿರುವ ಘಟನೆ ಹುಬ್ಬಳ್ಳಿಯ ಗಾಂಧಿವಾಡದಲ್ಲಿ ನಡೆದಿದೆ.

ಹೌದು. ಈ ಪುಂಡ ಪುಡಾರಿಗಳ ಗ್ಯಾಂಗ್ ರಂಪಾಟವು ಕ್ರಿಸ್ಮಸ್ ಹಬ್ಬದ ಸಡಗರದಲ್ಲಿದ್ದ ಸಾರ್ವಜನಿಕರಲ್ಲಿ ಭಯ ಉಂಟು ಮಾಡಿದೆ. ನಡು ರಸ್ತೆಯಲ್ಲಿ ಎರಡು ಪುಡಿ ರೌಡಿಗಳ ಗ್ಯಾಂಗ್ ಬೈಕ್‌ಗಳನ್ನು ಅಡ್ಡ ಹಾಕಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಪಬ್ಲಿಕ್ ನೆಕ್ಸ್ಟ್‌ಗೆ ಕಳಸಿದ್ದಾರೆ. ಇಂತಹ ಪುಡಾರಿಗಳಿಂದ ಇಲ್ಲಿನ ಸ್ಥಳೀಯರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವಂತ ಪರಿಸ್ಥಿತಿ ಎದುರಾಗಿದೆ.

ಮೊನ್ನೆ ಹುಬ್ಬಳ್ಳಿಗೆ ಗೃಹ ಸಚಿವರು ಆಗಮಿಸಿದ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಗೆ ಬಂದಿದೆ ಎಂಬ ಸಂದೇಶ ನೀಡಿದ್ದರು. ಆದ್ರೆ ಅಂದೇ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದ ಬೆನ್ನಲ್ಲೇ ಇದೀಗ ಪುಡಾರಿ ಗ್ಯಾಂಗ್‌ಗಳ ಹಾವಳಿ ಹುಬ್ಬಳ್ಳಿ ಮಂದಿಯ ನಿದ್ದೆಗೆಡಿಸುವಂತಾಗಿದೆ. ಇಂತಹ ಪುಡಿ ರೌಡಿಗಳ ಗ್ಯಾಂಗ್ ಹಾವಳಿಗೆ ಪೊಲೀಸ್ ಕಮಿಷನರೇಟ್ ಫುಲ್ ಸ್ಟಾಪ್ ಇಡಬೇಕಿದೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/12/2024 03:41 pm

Cinque Terre

71.85 K

Cinque Terre

5

ಸಂಬಂಧಿತ ಸುದ್ದಿ