ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಮತ್ತಷ್ಟು ಹದಗೆಡುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ತೋಳನಕೆರೆ ಬಳಿ ಇಂದು ರಾತ್ರಿ ನಡೆದಿದೆ.
ಹೌದು...ನಡು ರಸ್ತೆಯಲ್ಲೇ ಅಟ್ಟಾಡಿಸಿಕೊಂಡು ಯುವಕರ ಗುಂಪು ಬಡಿದಾಡಿಕೊಂಡಿವೆ. ಪೊಲೀಸರ ಭಯವೇ ಇಲ್ಲದೇ ಗುಂಪು ಸಂಘರ್ಷ ನಡೆದಿದೆ,
ನಗರದ ತೋಳನ ಕೆರೆ ಬಳಿ ಎರಡು ಗುಂಪುಗಳ ನಡುವೆ ಮಾತಿನ ಚಕುಮುಕಿ ನಡೆದಿದ್ದು, ಮಾತಗಳು ಅತೀರೇಕಕ್ಕೆ ಹೋಗಿ 50ಕ್ಕೂ ಹೆಚ್ಚು ಯುವಕರ ಗುಂಪು ಪರಸ್ಪರ ಬಡೆದಾಡಿಕೊಂಡಿದ್ದಾರೆ. ಹುಬ್ಬಳ್ಳಿಯ ಗೋಕುಲ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.
ಇನ್ನು ಮೊನ್ನೆಯಷ್ಟೇ ಹಾಡಹಗಲೇ ಯುವಕರ ಗುಂಪು ಪರಸ್ಪರ ಬಡಿದಾಡಿಕೊಂಡಿದ್ದ ಘಟನೆ ಬೆನ್ನಲ್ಲೆ ಇಂದು ಮತ್ತೆ ಅದೇ ರೀತಿ ನಡು ರಸ್ತೆಯಲ್ಲಿ ಯುವಕರ ಗುಂಪು ಹೊಡೆದಾಡಿಕೊಂಡಿದ್ದಾರೆ.
ಯುವಕರ ಈ ಪುಂಡಾಟಕ್ಕೆ ವಾಹನ ಸವಾರರು, ಸಾರ್ವಜನಿಕರು ತಬ್ಬಿಬ್ಬಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪೊಲೀಸರ ಭಯವೇ ಇಲ್ಲದಂತೆ ಯುವಕರು ವರ್ತಿಸಿದ್ದಾರೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/12/2024 10:57 pm