ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಯ್ಯಪ್ಪ… ಅಯ್ಯಪ್ಪ… ಪ್ರಾಣ ತೆಗೆಯುವ ನೀನು ದೇವರೇನಪ್ಪಾ - ಕಮಿಷನರ್ ಮುಂದೆ ಅಯ್ಯಪ್ಪ ಮಾಲಾಧಾರಿ ತಾಯಿ ಕಣ್ಣೀರು

ಹುಬ್ಬಳ್ಳಿ: ಸಿಲಿಂಡರ್ ಸ್ಫೋಟದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ 9 ಜನ ಮಾಲಾಧಾರಿಗಳ ಪೈಕಿ ಇಂದು ಮತ್ತೊಬ್ಬ ಮಾಲಾಧಾರಿ ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನಪ್ಪಿದ್ದು, 17 ವರ್ಷದ ಬಾಲಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ನನ್ನ ಮಗನನ್ನು ನನಗೆ ಕೊಡಿಸಿ ಅಂತಾ ಮಗನನ್ನು ಕಳೆದುಕೊಂಡ ತಾಯಿ ಕಮಿಷನರ್ ಶಶಿಕುಮಾರ್ ಮುಂದೆ ಕಣ್ಣೀರನ್ನು ಹಾಕಿದ್ದಾಳೆ.

ಉಣಕಲ್ ನ ಸುಬಾನಿ ಕಾಲೊನಿಯಲ್ಲಿ ವಾಸವಿದ್ದ ಮಲ್ಲವ್ವ ಎಂಬುವರಿಗೆ ಎರಡು ಮಕ್ಕಳ ಪೈಕಿ ರಾಜು ಎರಡನೆಯ ಮಗ, ರಾಜುವಿನ ಅಣ್ಣ ಕೆಲವು ವರ್ಷಗಳ ಹಿಂದೆ ತೀರಿಕೊಂಡಿದ್ದ. ಅದರ ನಡುವೆ ರಾಜುವಿನ ತಂದೆ ಕೂಡ ತೀರಿಕೊಂಡ. ಇದ್ದೊಬ್ಬ ಮಗನನ್ನು ಮಲ್ಲವ್ವ ಸಾಲ ಸೋಲ ಮಾಡಿ ಕಾಲೇಜನ್ನು ಕಲಿಸುತ್ತಿದ್ದಳು. ರಾಜುವಿಗೆ ಮೊದಲಿನಿಂದಲೂ ಕೂಡಾ ಅಯ್ಯಪ್ಪ ಸ್ವಾಮಿಯ ಮೇಲೆ ಅಪಾರ ಶ್ರದ್ಧೆ ಇದ್ದ ಕಾರಣ ಅಯ್ಯಪ್ಪ ಮಾಲೆಯನ್ನು ಧರಿಸಿ ವ್ರತ ಆಚರಣೆ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿ ಇದ್ದೊಬ್ಬ ಮಗ ಕೂಡ ಬಾರದ ಲೋಕಕ್ಕೆ ತೆರಳಿದ್ದಾನೆ.

ಮಗನ ಅಗಲಿಕೆಯನ್ನು ಸಹಿಸಲು ಆಗದೇ ಮಲ್ಲವ್ವ ಅಯ್ಯಪ್ಪ ಸ್ವಾಮೀ ಎನ್ನುವ ದೇವರೆ ಸುಳ್ಳು, ದೇವರು ಅಂದ್ರೆ ಎಲ್ಲರನ್ನು ಕಾಪಾಡುತ್ತಾನೆ. ಆದ್ರೆ ಜೀವ ತೆಗೆಯುವ ಕೆಲಸವನ್ನು ಮಾಡಲ್ಲ, ಅಯ್ಯಪ್ಪ ಅಯ್ಯಪ್ಪ ಸ್ವಾಮೀ ಶರಣಂ ಅಯ್ಯಪ್ಪ ಎಲ್ಲಿದ್ದಾನೆ ಅಯ್ಯಪ್ಪ ಅಂತಾ ಮಗನನ್ನು ಕಳೆದುಕೊಂಡ ರೋಧಿಸುತ್ತಿದ್ದ ರಾಜು ಕುಟುಂಬಕ್ಕೆ ಕಮಿಷನರ್ ಎನ್ ಶಶಿಕುಮಾರ್ ಸಾಂತ್ವನ ಹೇಳಿದರು.

ಎದೆಯುದ್ದ ಬೆಳೆದ ಮಗ ಆಸರೆಯಾಗುತ್ತಾನೆಂದು ಕನಸಿನ ಮನೆಯನ್ನು ಕಟ್ಟಿದ್ದ ಮಲ್ಲವ್ವಳ ಕನಸಿಗೆ ಬರಸಿಡಿಲು ಬಡಿದು ಕನಸೇ ಸುಟ್ಟು ಹೋಗಿದೆ. ಇಷ್ಟು ದಿನಗಳ ಕಾಲ ಪಾಲನೆ ಪೋಷಣೆ ಮಾಡಿದ ಮಗ ಆಸರೆಯಾಗುತ್ತಾನೆ ಎಂಬ ಕನಸು ಕನಸಾಗಿಯೇ ಉಳಿದಿದೆ. ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಆಗದ ಮಲ್ಲವ್ವಳಿಗೆ ಆ ದೇವರೆ ಸಾಂತ್ವನ ಹೇಳುವ ಕೆಲಸವನ್ನು ಮಾಡಬೇಕಿದೆ.

ವಿನಯ ರೆಡ್ಡಿ, ಕ್ರೈಂ ಬ್ಯುರೋ, ಪಬ್ಲಿಕ್ ನೆಕ್ಸ್ಟ್

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/12/2024 04:09 pm

Cinque Terre

133.81 K

Cinque Terre

17

ಸಂಬಂಧಿತ ಸುದ್ದಿ