ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ:‌ "ಕೊನೆ ಬಾರಿ ಮುಖ ನೋಡಲು ಅವಕಾಶ ಕೊಡಿ"- ಮೃತ ಅಯ್ಯಪ್ಪ ಮಾಲಾಧಾರಿ ಲಿಂಗರಾಜ ಕುಟುಂಬಸ್ಥರ ಆಕ್ರಂದನ

ಹುಬ್ಬಳ್ಳಿ:‌ ಸಿಲಿಂಡರ್ ಸ್ಫೋಟದಿಂದಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ 19 ವರ್ಷದ ಅಯ್ಯಪ್ಪ ಮಾಲಾಧಾರಿ ಲಿಂಗರಾಜ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ ಹಿನ್ನೆಲೆಯಲ್ಲಿ ಕಿಮ್ಸ್ ಶವಾಗಾರದ ಮುಂದೆ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ.

ಅಚ್ಚವ್ವನ ಕಾಲೋನಿಯಲ್ಲಿ ವಾಸವಿದ್ದ ಲಿಂಗರಾಜ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಅಯ್ಯಪ್ಪ ಸ್ವಾಮಿ ಮೇಲೆ ಅತಿಯಾದ ಭಕ್ತಿಯನ್ನು ಹೊಂದಿದ್ದ ಲಿಂಗರಾಜ ಇದೇ ಮೊದಲ ಬಾರಿಗೆ ಅಯ್ಯಪ್ಪ ಮಾಲೆಯನ್ನು ಧರಿಸಿದ್ದ. ಆದ್ರೆ, ವಿಧಿಯಾಟವೇ ಬೇರೆಯಾಗಿತ್ತು.

ಅಯ್ಯಪ್ಪನ ವ್ರತ ಮಾಡುತ್ತಿದ್ದ ಸ್ಥಳದಲ್ಲಿಯೇ ಬೆಂಕಿ ಅವಘಡ ಸಂಭವಿಸಿ ಲಿಂಗರಾಜ ಸೇರಿದಂತೆ 9 ಮಂದಿ ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ಮೂವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಈ ದುರ್ಘಟನೆ ಮಾಸುವ ಮುನ್ನವೇ ಇಂದು ಸಾಯಂಕಾಲ ಲಿಂಗರಾಜ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಈ ವೇಳೆ ಶವವನ್ನು ಕಿಮ್ಸ್ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ. ಮೃತ ಲಿಂಗರಾಜ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದ ಹಾಗೆ ಕೊನೆಯ ಸಾರಿ ಲಿಂಗರಾಜ ಮುಖವನ್ನು ನೋಡುವ ಸಲುವಾಗಿ ನೂರಾರು ಸಂಖ್ಯೆಯಲ್ಲಿ ಪರಿಚಯದವರು ಹಾಗೂ ಕುಟುಂಬದವರು ಶವಾಗಾರದ ಸಿಬ್ಬಂದಿಗೆ ಮುಖವನ್ನು ನೋಡಲು ಕೊನೆಯ ಅವಕಾಶ ಮಾಡಿ ಕೊಡಿ ಎನ್ನುವ ಮಾತುಗಳು ಎಲ್ಲರಲ್ಲೂ ಕಣ್ಣೀರು ತರಿಸುವಂತಿತ್ತು.

-ವಿನಯ ರೆಡ್ಡಿ, ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/12/2024 06:58 pm

Cinque Terre

111.57 K

Cinque Terre

12

ಸಂಬಂಧಿತ ಸುದ್ದಿ