ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಬ್ರೇಕಿಂಗ್ : ಉಣಕಲ್‌ನಲ್ಲಿ ಸಿಲಿಂಡರ್ ಸ್ಫೋಟ ಚಿಕಿತ್ಸೆ ಫಲಿಸದೇ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು, ಇನ್ನುಳಿದವರಿಗೆ ಮುಂದುವರೆದ ಚಿಕಿತ್ಸೆ

ಹುಬ್ಬಳ್ಳಿ: ಕಳೆದ ರವಿವಾರ ಉಣಕಲ್‌ನ ಅಚ್ಚವ್ವನ ಕಾಲೋನಿಯಲ್ಲಿ ಸಿಲಿಂಡರ್ ಸ್ಪೋಟದಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ 9 ಅಯ್ಯಪ್ಪ ಮಾಲಾಧಾರಿಗಳ ಪೈಕಿ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಚಿಕಿತ್ಸೆ ಫಲಕಾರಿಯಾಗದೆ ಕಿಮ್ಸ್ ಆಸ್ಪತ್ರೆಯಲ್ಲಿ ಇಂದು ಬೆಳಗಿನ ಜಾವ ಸಾವನಪ್ಪಿದ್ದಾರೆ.

ಮೃತ ಅಯ್ಯಪ್ಪ ಮಾಲಾಧಾರಿಗಳನ್ನು 17 ವರ್ಷದ ಸಂಜಯ ಹಾಗೂ 58 ವರ್ಷದ ನಿಜಲಿಂಗಪ್ಪ ಬೇಪುರಿ ಇಂದು ಬೆಳಗಿನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಪೈಕಿ ಸಂಜಯ 80℅ ಹಾಗೂ ನಿಜಲಿಂಗಪ್ಪ 86℅ ಪ್ರಮಾಣದಲ್ಲಿ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದರು. 9 ಜನ ಅಯ್ಯಪ್ಪ ಮಾಲಾಧಾರಿಗಳಿಗೆ ರಾಜ್ಯ ಸರ್ಕಾರ ಚಿಕಿತ್ಸೆ ನೀಡಲು ಬೆಂಗಳೂರಿನಿಂದ ವಿಶೇಷ ತಜ್ಞರನ್ನು ಕರೆಯಿಸಿ ಚಿಕಿತ್ಸೆಯನ್ನು ಕೊಡಿಸುವ ಕಾರ್ಯವನ್ನು ಮಾಡಿತ್ತು.

ಈ ಪೈಕಿ ಇನ್ನೊರ್ವ ಅಯ್ಯಪ್ಪ ಮಾಲಾಧಾರಿ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರು ಹಾಗೂ ಬೆಂಗಳೂರಿನ ತಜ್ಞ ವೈದ್ಯರ ತಂಡ ಕೂಡಾ ಇನ್ನುಳಿದ 7 ಜನ ಅಯ್ಯಪ್ಪ ಮಾಲಾಧಾರಿಗಳಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ. ಸದ್ಯ ಇಬ್ಬರು ಅಯ್ಯಪ್ಪ ಮಾಲಧಾರಿಗಳ ಸಾವಿನಿಂದ ಉಣಕಲ್ ಹಾಗೂ ಕಿಮ್ಸ್ ಆಸ್ಪತ್ರೆಯ ಮುಂದೆ ನೀರವ ಮೌನ ಆವರಿಸಿದೆ.

ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

26/12/2024 07:51 am

Cinque Terre

165.06 K

Cinque Terre

24

ಸಂಬಂಧಿತ ಸುದ್ದಿ