ಹುಬ್ಬಳ್ಳಿ: ಸರ್ಕಾರದ ಯೋಜನೆ ಆರ್ಥಿಕವಾಗಿ ಸಬಲರಿಗೆ ಎಂಬುವಂತ ಮಾತನ್ನು ಅಲ್ಲಗಳೆದು, ದುಡಿಯುವ ಕೈಗಳಿಗೆ ಆಸರೆಯಾಗಿರುವುದು ಕಾರ್ಮಿಕ ಇಲಾಖೆ. ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ಕಾರ್ಮಿಕ ಇಲಾಖೆಯಲ್ಲಿ ಬಹುದೊಡ್ಡ ಕ್ರಾಂತಿ ಮಾಡಿದ್ದು, ದುಡಿಯುವ ಕೈಗಳಿಗೆ ನೆರವಾಗಿ, ಶ್ರಮಿಕ ವರ್ಗದ ಕಲ್ಯಾಣಕ್ಕಾಗಿ ಹಲವಾರು ಯೋಜನಾ ಕಾರ್ಯವನ್ನು ಜಾರಿಗೆ ತಂದಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರವು ಅಸಂಘಟಿತ ವರ್ಗಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಸದುದ್ದೇಶದಿಂದ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ 23 ಅಸಂಘಟಿತ ವರ್ಗಗಳ ಕಾರ್ಮಿಕರಿಗೆ ಉಚಿತವಾಗಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವ ಮೂಲಕ ಕಾರ್ಮಿಕರ ಹಿತರಕ್ಷಣೆ ಕಾಯಲು ಕಾರ್ಮಿಕ ಇಲಾಖೆ ಮುಂದಾಗಿದೆ. ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ರಾಜ್ಯಾದ್ಯಂತ ಲಕ್ಷಾಂತರ ಫಲಾನುಭವಿಗಳು ಕಾರ್ಮಿಕ ಇಲಾಖೆಯಿಂದ ಲಾಭವನ್ನು ಪಡೆದಿದ್ದಾರೆ. ಹಾಗಿದ್ದರೇ ಕಟ್ಟಡ ಕಾರ್ಮಿಕ ವರ್ಗದ ಜನರು ಏನಂತಾರೇ ಕೇಳಿ..
ನಮ್ಮ ದುಡಿಮೆಯಿಂದ ನಮ್ಮ ಮನೆ ನಡೆಯುತ್ತದೇ ನಿಜ ನಮ್ಮ ಬದುಕಿಗೆ ಭದ್ರತೆಯೇ ಇಲ್ಲ ಎಂದು ಕೊಂಡಿದ್ದ ಕಾರ್ಮಿಕರ ಬಾಳಿಗೆ ಈಗ ಕಾರ್ಮಿಕ ಇಲಾಖೆ ಬೆಳಕಾಗಿದೆ. ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ ಲಾಡ್ ಅವರ ನೇತೃತ್ವದಲ್ಲಿ ಶ್ರಮಜೀವಿಗಳಿಗೆ ಸಮಾಜದ ಮುಖ್ಯವಾಹಿನಿಯಲ್ಲೊಂದು ನೆಲೆ ಕಂಡುಕೊಳ್ಳಬೇಕು ಎಂಬುವಂತ ಮಹತ್ತರ ಕನಸು ಈಗ ಎಲ್ಲರ ಮನೆ ಹಾಗೂ ಮನ ತಲುಪುತ್ತಿದೆ. ಹಾಗಿದ್ದರೇ ಕಟ್ಟಡ ಕಾರ್ಮಿಕ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೂಡ ಸಚಿವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಒಟ್ಟಿನಲ್ಲಿ ಐದು ಗ್ಯಾರಂಟಿಗಳ ಮೂಲಕ ಜನಪರ ಕಾರ್ಯವನ್ನು ಮಾಡಿರುವ ಕಾಂಗ್ರೆಸ್ ಸರ್ಕಾರ ಈಗ ಮಹತ್ವದ ಮೈಲಿಗಲ್ಲನ್ನು ಹುಟ್ಟು ಹಾಕಿದ್ದು, ಕಾರ್ಮಿಕ ಇಲಾಖೆಯ ಯೋಜನೆಯಿಂದ ಈಗ ಜನಮಾನಸದಲ್ಲಿ ನೆಮ್ಮದಿ ನೆಲೆಸಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/12/2024 07:11 pm