ಹುಬ್ಬಳ್ಳಿ: ಭಾರತದ ಬದಲಾವಣೆಯನ್ನು ಆರ್ಥಿಕ ದಿಕ್ಕನ್ನ ಬದಲಾಯಿಸಿದಂತ ವಿಶ್ವ ಪ್ರಖ್ಯಾತ ಆರ್ಥಿಕ ತಜ್ಞನನ್ನ ನಾವು ಕಳೆದುಕೊಂಡಿದ್ದೇವೆ. ಡಾ.ಮನಮೋಹನ್ ಸಿಂಗ್ ಅವರು ನಿನ್ನೆ ಕೊನೆಯ ಉಸಿರನ್ನು ಎಳೆದಿದ್ದಾರೆ. ನಮ್ಮೆಲ್ಲರಿಗೂ ಬಹಳಷ್ಟು ನೋವು ದುಃಖ ಆಗಿದೆಯೆಂದು ಗೃಹ ಸಚಿವ ಜಿ.ಪರಮೇಶ್ವರ್ ಸಂತಾಪ ಸೂಚಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, 1991 ರಲ್ಲಿ ನರಸಿಂಹರಾವ್ ಅವರು ಪ್ರಧಾನಮಂತ್ರಿಯಾಗಿದ್ದಾಗ ಮನಮೋಹನ್ ಸಿಂಗ್ ಹಣಕಾಸಿನ ಸಚಿವರಾಗಿ ಹೊಸ ಅಧ್ಯಾಯವನ್ನು ಪ್ರಾರಂಭ ಮಾಡಿದ್ರು. ಇವತ್ತೇನಾದ್ರೂ ವಿಶ್ವದಲ್ಲಿ ಭಾರತ ಆರ್ಥಿಕತೆಯಲ್ಲಿ ಹೆಸರನ್ನ ಪಡೆದುಕೊಂಡಿದ್ದರೆ ಅದಕ್ಕೆ ಮೂಲ ಕಾರಣ ಮನಮೋಹನ್ ಸಿಂಗ್. ಇವತ್ತು ಇಡೀ ವಿಶ್ವಕ್ಕೆ ಒಂದು ನಷ್ಟ ಆಗಿದೆ. ಬರಾಕ್ ಒಬಾಮ ಅವರು ಅಮೆರಿಕ ಅಧ್ಯಕ್ಷರಾಗಿದ್ದಾಗ ಮನಮೋಹನ್ ಸಿಂಗ್ ಅವರನ್ನ ಸಂಪರ್ಕಿಸಿ ಸಲಹೆ ಪಡೆಯುತ್ತಿದ್ರು. ವಿಶ್ವ ಹಂತದ ಆರ್ಥಿಕ ತಜ್ಞನನ್ನ ನಾವು ಕಳೆದುಕೊಂಡಿದ್ದೇವೆ. ಈ ಸಂದರ್ಭದಲ್ಲಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ. ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ಕೊಡಲಿ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/12/2024 12:37 pm