ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಅಸಂಘಟಿತ ಕಾರ್ಮಿಕರ ಅಭಿವೃದ್ಧಿಗೆ ಆದ್ಯತೆ: ಹಮಾಲರ ಬದುಕಿನಲ್ಲಿ ಹೊಸ ಅಧ್ಯಾಯ ಬರೆದ ಸಚಿವ ಸಂತೋಷ ಲಾಡ್

ಹುಬ್ಬಳ್ಳಿ: ಮೊಣ ಭಾರದ ಚೀಲದೊಂದಿಗೆ ಬದುಕಿನ ಭಾರ ಹೊತ್ತವರಿಗೆ ಕಾರ್ಮಿಕ ಇಲಾಖೆಯಿಂದ ಹೆಗಲು ಕೊಡಲು ಹೊರಟವರೇ ಕಾರ್ಮಿಕ ಸಚಿವ ಸಂತೋಷ ಲಾಡ್. ಕಾರ್ಮಿಕ ಇಲಾಖೆಯಲ್ಲಿಯೇ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಬಹುದೊಡ್ಡ ಕ್ರಾಂತಿ ಮಾಡಲು ಹೊರಟಿದ್ದಾರೆ. ಅಸಂಘಟಿತ 23 ವಲಯದ ಕಾರ್ಮಿಕರಲ್ಲಿ ಹಮಾಲರನ್ನು ಸೇರ್ಪಡೆ ಮಾಡಿ ಹಮಾಲಿ ಕಾರ್ಮಿಕರ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ.

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಸಹಜ ಮರಣ ಪರಿಹಾರ ಮತ್ತು ಅಂತ್ಯಕ್ರಿಯೆ ವೆಚ್ಚದ ಮೂಲಕ ಬಡ ಕುಟುಂಬಕ್ಕೆ ಆರ್ಥಿಕ ನೆರವು ನೀಡುತ್ತಿದ್ದಾರೆ. ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಲ್ಲಿ ಅಸಂಘಟಿತ ಕಾರ್ಮಿಕರ ನೋಂದಣಿ ಮತ್ತು ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುತ್ತಿದೆ. ಹೌದು.. ಹತ್ತು ಹಲವಾರು ಯೋಜನೆಯನ್ನು ಕಾರ್ಮಿಕರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ಕೆ ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ ಲಾಡ್ ಮುಂದಾಗಿದ್ದಾರೆ. ಶ್ರಮದ ಬೆವರಿನ ಹನಿ ಇಂಗಿ ಹೋಗಬಹುದು. ಆದರೆ, ಕಾರ್ಮಿಕ ಶ್ರಮ ಎಂದಿಗೂ ಭಾರತದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ಎಂದುಕೊಂಡಿರುವ ಸಹೃದಯಿ ನಾಯಕ ಸಂತೋಷ ಲಾಡ್ ಹಮಾಲಿ ಕಾರ್ಮಿಕರಿಗೆ ಹಾಗೂ ಅವರ ಕುಟುಂಬಕ್ಕೆ ವರದಾನದ ರೀತಿಯಲ್ಲಿ ಯೋಜನೆ ನೀಡಲು ಮುಂದಾಗಿದ್ದಾರೆ.

23 ಅಸಂಘಟಿತ ಕಾರ್ಮಿಕರ ವಲಯದಲ್ಲಿ ಬರುವ ಹಮಾಲರು ಕೂಡ ಆರ್ಥಿಕವಾಗಿ, ಶೈಕ್ಷಣಿಕ, ಸಾಮಾಜಿಕವಾಗಿ ಸದೃಢರಾಗಬೇಕು. ಹಮಾಲರ ಮಕ್ಕಳು ಹಮಾಲರಾಗದಂತೆ ಭವ್ಯ ಭಾರತದ ಕನಸಿನ ಪ್ರಜೆಗಳಾಗಬೇಕು ಎಂಬುವಂತ ಬಹುದೊಡ್ಡ ಆಶಾಭಾವನೆಯೊಂದಿಗೆ ಮಹತ್ವದ ಕಾರ್ಯಕ್ಕೆ ಕಾರ್ಮಿಕ ಸಚಿವರು ಹಲವಾರು ಯೋಜನೆ ತಂದಿದ್ದಾರೆ. ಈ ಬಗ್ಗೆ ಹಮಾಲರು ಕೂಡ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಅಸಂಘಟಿತ ವರ್ಗದ ಕಾರ್ಮಿಕರ ಬದುಕು ಬಂಗಾರವಾಗಬೇಕು. ಸರ್ಕಾರಿ ಕಚೇರಿಗೆ ಅಲೆದು ಚಪ್ಪಲಿ ಸವೆಸುವ ಕೆಳವರ್ಗದ ಫಲಾನುಭವಿಗಳಿಗೆ ಸರ್ಕಾರದ ಯೋಜನೆ ಮನೆ-ಮನ ಮುಟ್ಟುವಂತೆ ಮಾಡಲು ಹೊರಟಿರುವುದು ನಿಜಕ್ಕೂ ವಿಶೇಷವಾಗಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/12/2024 10:44 pm

Cinque Terre

151.55 K

Cinque Terre

6

ಸಂಬಂಧಿತ ಸುದ್ದಿ