ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕವಿವಿ ಬೋಧಕೇತರ ಸಿಬ್ಬಂದಿಯಿಂದ ಮುಂಬಡ್ತಿಗಾಗಿ ಪ್ರತಿಭಟನೆ

ಧಾರವಾಡ: ಮುಂಬಡ್ತಿ ನೀಡುವಂತೆ ಆಗ್ರಹಿಸಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿ ನಡೆಸುತ್ತಿರುವ ಮುಷ್ಕರ 6ನೇ ದಿನಕ್ಕೆ ಕಾಲಿಟ್ಟಿದೆ.

ಕೇವಲ ಮುಂಬಡ್ತಿ ಮಾತ್ರವಲ್ಲ ಹಲವು ವರ್ಷಗಳಿಂದ ಸಿಬ್ಬಂದಿಗೆ ವೈದ್ಯಕೀಯ ವೆಚ್ಚ ಸಹಿತ ಭರಿಸಿಲ್ಲ. ಪರಿಹಾರ ಭತ್ಯೆ ಮತ್ತು ಹಬ್ಬದ ಮುಂಗಡ ಪಾವತಿ ಸಹ ಮಾಡಿಲ್ಲ ಎಂಬ ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೋಧಕೇತರ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಮುಂಬಡ್ತಿ ಮಾಡಿದ ಆದೇಶ ಪ್ರತಿ ಕೊಟ್ಟ ಮೇಲೆಯೇ ಪ್ರತಿಭಟನೆ ಕೈ ಬಿಡುವುದಾಗಿ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

28/12/2024 06:26 pm

Cinque Terre

51.45 K

Cinque Terre

0

ಸಂಬಂಧಿತ ಸುದ್ದಿ