ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಹೆಚ್ಚಿದ ಟ್ರಾಫಿಕ್ ಸಮಸ್ಯೆ : ದಾರಿಗಾಗಿ ಅಂಬ್ಯುಲೆನ್ಸ್ ಪರದಾಟ..!

ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಅದರಲ್ಲೂ ತುರ್ತು ಸೇವೆ ಒದಗಿಸುವ ಅಂಬ್ಯುಲೆನ್ಸ್ ಮಾರ್ಗಮಧ್ಯದಲ್ಲಿ ಸಿಲುಕಿಕೊಂಡು ಪರದಾಡುವ ಸನ್ನಿವೇಶಗಳು ಸರ್ವೇ ಸಾಮಾನ್ಯವಾಗಿದೆ.

ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಸುಮಾರು ಕಾಲ ಅಂಬ್ಯುಲೆನ್ಸ್ ಮಾರ್ಗಮಧ್ಯದಲ್ಲಿಯೇ ಪರದಾಡಿದ ಘಟನೆ ಮಧ್ಯಾಹ್ನ 2 ಗಂಟೆ ಸಮಯಕ್ಕೆ ನಡೆದಿದ್ದು, ಟ್ರಾಫಿಕ್ ಸಮಸ್ಯೆಯಿಂದ ಜನರಿಗೆ ಮಾತ್ರವಲ್ಲದೆ ರೋಗಿಗಳನ್ನು ಕೊಂಡೊಯ್ಯುವ ಅಂಬ್ಯುಲೆನ್ಸ್ ಕೂಡ ಪರದಾಡುವಂತಾಗಿದೆ.

ಪ್ಲೈಓವರ್ ಕಾಮಗಾರಿ ಹಾಗೂ ಇನ್ನಿತರ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು, ಅಂಬ್ಯುಲೆನ್ಸ್ ಹಾಗೂ ತುರ್ತು ಪರಿಸ್ಥಿತಿಯಲ್ಲಿರುವ ವಾಹನಗಳು ಟ್ರಾಫಿಕ್ ನಿಂದ ಹೊರ ಹೋಗಲು ಸರ್ಕಸ್ ಮಾಡುವಂತಾಗಿದೆ.

Edited By : Suman K
Kshetra Samachara

Kshetra Samachara

28/12/2024 05:05 pm

Cinque Terre

21.37 K

Cinque Terre

1

ಸಂಬಂಧಿತ ಸುದ್ದಿ