ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅರ್ಧ ಶತಮಾನದ ಹೋರಾಟಕ್ಕೆ ಜಯ ತಂದ ಕಾರ್ಮಿಕ ಸಚಿವರು - ಚಾಲಕರ ಕುಟುಂಬದಲ್ಲಿ ಸಂತೋಷದ ನೆಲೆ..!

ಹುಬ್ಬಳ್ಳಿ: ಆಟೋ..ಆಟೋ...ಆಟೋ...ಎಂದು ಕೂಗಿ ಕರೆದವರ ಧ್ವನಿಗೆ ಓಡುತ್ತಲೇ ಹತ್ತಿಪ್ಪತ್ತು ರೂಪಾಯಿಗೆ ಬಹುದೂರ ಹೋಗುವ ಕಾರ್ಮಿಕರ ಶ್ರಮಕ್ಕೆ ಈಗ ಬೆಲೆ ಬಂದಂತಾಗಿದೆ. ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ ಲಾಡ್ ಅವರ ಜನಪರ ಕಾಳಜಿಯಿಂದ ಈಗ ಖಾಸಗಿ ವಾಣಿಜ್ಯ ಸಾರಿಗೆ ಚಾಲಕರಿಗೆ ಹಾಗೂ ಆಟೋ ಡ್ರೈವರ್‌ಗಳಿಗೆ ಬಹುದೊಡ್ಡ ಭರವಸೆ ಬಂದಿದೆ.

ಕಳೆದ ಸುಮಾರು 55 ವರ್ಷಗಳಿಂದ ಆಟೋ ಚಾಲಕರನ್ನು ಕಾರ್ಮಿಕ ಇಲಾಖೆಯ ಅಸಂಘಟಿತ ವಲಯದಲ್ಲಿ ಗುರುತಿಸುವ ಬಗ್ಗೆ ಹೋರಾಟಗಳು ನಡೆಯುತ್ತಲೇ ಬಂದಿತ್ತು. ಆದರೆ ಇದುವರೆಗೂ ಅದು ಕೈಗೂಡಿರಲಿಲ್ಲ, ಈಗ ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಖಾಸಗಿ ವಾಣಿಜ್ಯ ಚಾಲಕರನ್ನು ಹಾಗೂ ಆಟೋ ಡ್ರೈವರ್‌ಗಳನ್ನು ಅಸಂಘಟಿತ 23 ವಲಯಗಳಲ್ಲಿ ಒಬ್ಬರನ್ನಾಗಿ ಸೇರಿಸಿರುವುದು ಈಗ ಬಡ ಕುಟುಂಬಗಳಿಗೆ ಸಂಭ್ರಮ ಇಮ್ಮಡಿಗೊಂಡತಾಗಿದೆ. ಈ ಬಗ್ಗೆ ಆಟೋ ಚಾಲಕರು ಏನಂತಾರೇ ಕೇಳಿ..

ಒಟ್ಟಿನಲ್ಲಿ ಅಸಂಘಟಿತ ವಲಯದ ಕಾರ್ಮಿಕರಲ್ಲಿ ಖಾಸಗಿ ಚಾಲಕರನ್ನು ಗುರುತಿಸಿರುವುದು ನಿಜಕ್ಕೂ ವಿಶೇಷವಾಗಿದೆ. ಕಾರ್ಮಿಕ ಸಚಿವ ಸಂತೋಷ ಲಾಡ್ ಅವರ ಕಾರ್ಯಕ್ಕೆ ಲಕ್ಷಾಂತರ ಕುಟುಂಬಕ್ಕೆ ಆಸರೆ ದೊರೆತಂತಾಗಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

28/12/2024 07:36 pm

Cinque Terre

85.89 K

Cinque Terre

2

ಸಂಬಂಧಿತ ಸುದ್ದಿ