ಕುಂದಗೋಳ : ಪಟ್ಟಣ ಪಂಚಾಯಿತಿ ಅಧಿಕಾರಿಗಳೇ ನಿಮ್ಮ ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿನ ಹೊಂಡದ ನೀರು ಲೋಕೋಪಯೋಗಿ ರಸ್ತೆಗೆ ಹರಿ ಬಿಡುವುದನ್ನು ವಿರೋಧಿಸಿ ಜನ ನಿಮಗೆ ಛೀಮಾರಿ ಹಾಕಿದ್ದಾರೆ.
ಹೌದು ! ಕುಂದಗೋಳ ಕಡಪಟ್ಟಿ ಮಾರ್ಗ ಮಧ್ಯೆ ಇರೋ ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕದ ಹೊಂಡದಲ್ಲಿನ ಕಲುಷಿತ ನೀರು ಕಳೆದ ಮೂರು ದಿನಗಳಿಂದ ರಸ್ತೆ ಮೇಲೆ ಹರಿಯುತ್ತಿದೆ.
ಈ ಪರಿಣಾಮ ರಸ್ತೆ ಹಾಳಾಗಿ ಜನ, ವಾಹನ ಸಂಚಾರ ದುಸ್ತರವಾಗಿದೆ. ಇದಲ್ಲದೇ ನೀರು ಸರಾಗವಾಗಿ ಹರಿಯಬೇಕಾದ ಮಾರ್ಗದಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕಸ ಸುರಿದು ಇದೀಗ ಲೋಕೋಪಯೋಗಿ ರಸ್ತೆಗೆ ನೀರು ಬಿಡುತ್ತಿರುವ ಅನ್ಯಾಯದ ವಿರುದ್ಧ ರೈತರು ಛೀ....ಥೂ ಎನ್ನುತ್ತಿದ್ದಾರೆ.
ಇನ್ನೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವ ಕಾರಣ ರಸ್ತೆ ಎಷ್ಟೇ ಅವ್ಯವಸ್ಥೆ ಆದರೂ ಡೋಂಟ್ ಕೇರ್ ಎಂದು ಸುಮ್ಮನಿದ್ದಾರೆ.
ಮುಖ್ಯವಾಗಿ ಅಮರಶಿವ ಬಡಾವಣೆ, ಕುಂದಗೋಳ, ಕಡಪಟ್ಟಿ, ಅಲ್ಲಾಪೂರ ಕೃಷಿಕ ಓಡಾಡುವ ರಸ್ತೆ ಮೇಲೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಳು ಮಾಡಿದ್ದಾರೆ.
ಒಟ್ಟಾರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಮ್ಮ ಕೆಲಸ ಸರಿ ಮಾಡಿಕೊಳ್ಳಲು ಲೋಕೋಪಯೋಗಿ ರಸ್ತೆ ಹಾಳು ಮಾಡುತ್ತಿರುವುದು ಸ್ಪಷ್ಟವಾಗಿದೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ
Kshetra Samachara
27/12/2024 06:01 pm