ಹುಬ್ಬಳ್ಳಿ: ಜೀವ ವಿಮೆ, ಅಪಘಾತ ವಿಮೆ ನಿಜಕ್ಕೂ ಬಹುದೊಡ್ಡ ಸಹಾಯವನ್ನೇ ಮಾಡುತ್ತದೆ. ಅದರಲ್ಲೂ ಕಾರ್ಮಿಕ ಇಲಾಖೆಯ ಅಪಘಾತ ವಿಮೆ, ಕಮರಿ ಹೋಗಿದ್ದ ಕಾರ್ಮಿಕನ ಬದುಕಿಗೆ ಬೆಳಕಾಗಿದೆ. ಸಚಿವ ಸಂತೋಷ ಲಾಡ್ ಅವರ ದೂರದೃಷ್ಟಿಯ ಕಾರ್ಯ ಈಗ ಮುಕ್ತುಮ್ ಹುಸೇನ್ ಬಾಳಿಗೆ ಕಣ್ಣಾಸರೆಯಾಗಿದೆ.
ಆತ ಮೂರು ತಿಂಗಳ ಹಿಂದೆಯಷ್ಟೇ ಬೈಕ್ ಮೇಲೆ ಕೆಲಸಕ್ಕೆ ಹೊರಟಿದ್ದ. ರಸ್ತೆ ಅಪಘಾತದಲ್ಲಿ ಕಾಲಿನಲ್ಲಿ ಎಲುಬು ಕಟ್ ಆಗಿದ್ದು, ಇನ್ನೆನೂ ನನ್ನ ದುಡಿಯುವ ಜೀವನಕ್ಕೆ ಬ್ರೇಕ್ ಬಿದ್ದಿತು. ಮನೆ ನಿರ್ವಹಣೆ, ಮಕ್ಕಳ ಎಜುಕೇಶನ್ ಹೇಗೆ ಎಂದು ಚಿಂತಾಕ್ರಾಂತನಾಗಿದ್ದವನ ಬಾಳಿಗೆ ಅಭಯ ಹಸ್ತ ನೀಡಿದ್ದೇ ಕಾರ್ಮಿಕ ಇಲಾಖೆ ಹಾಗೂ ಸಚಿವ ಸಂತೋಷ ಲಾಡ್. ಹೌದು.. ದುಡಿಯುವ ಕೈಗಳಿಗೆ ಸಂಕಷ್ಟ ಬಂದಾಗ ಸಂಬಂಧಿಕರು ದೂರಾಗಬಹುದು ಆದರೇ ಕೈ ಹಿಡಿದು ಜೊತೆಯಾಗಿ ಕಣ್ಣೀರು ಒರೆಸುವ ಮೂಲಕ ಕಾರ್ಮಿಕ ಇಲಾಖೆ ಮಹತ್ವದ ಕಾರ್ಯವನ್ನು ಮಾಡಿದೆ. ಈ ಬಗ್ಗೆ ಕಾರ್ಮಿಕ ಮಕ್ತುಮ್ ಹುಸೇನ್ ಏನಂತಾರೇ ಕೇಳಿ..
ಒಟ್ಟಿನಲ್ಲಿ ಕಾರ್ಮಿಕ ಇಲಾಖೆಯ ನೆರವು ನಿಜಕ್ಕೂ ನೊಂದವರ ಪಾಲಿಗೆ ಬೆಳಕಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ಕಾರ್ಮಿಕನ ಕುಟುಂಬಕ್ಕೆ ರಾಜ್ಯ ಸರ್ಕಾರದ ಯೋಜನೆ ಲಾಭವಾಗಿದ್ದು, ಈಗ ಚಿಕಿತ್ಸೆ ನಡುವೆಯೂ ಕುಟುಂಬ ನಿರ್ವಹಣೆ ಮಾಡುವ ಮೂಲಕ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/12/2024 02:59 pm