ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮನಮೋಹನ್ ಸಿಂಗ್ ನಿಧನಕ್ಕೆ ವೀರೇಂದ್ರ ಹೆಗ್ಗಡೆ ಸಂತಾಪ - ಆರ್ಥಿಕ ಸುಸ್ಥಿರತೆಗೆ ಬಹುದೊಡ್ಡ ಕೊಡುಗೆ

ಹುಬ್ಬಳ್ಳಿ: ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.‌ ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ್ದಾರೆ.

ಹುಬ್ಬಳ್ಳಿ ತಾಲೂಕಿನ ವರೂರಿನಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ದೇಶಕ್ಕೆ ಆರ್ಥಿಕ ಸುಸ್ಥಿರತೆ ತಂದು ಕೊಟ್ಟವರು ಮನಮೋಹನ್ ಸಿಂಗ್. ದೇಶದ ಭವಿಷ್ಯದ ಬಗ್ಗೆ ಚಿಂತನೆ ಮಾಡ್ತಿದ್ದರು. ದೇಶಕ್ಕೆ ಸಬಲತೆ ಕೊಟ್ಟಿದ್ದರು. ‌ಅವರ ಸೇವೆ ಶಾಶ್ವತವಾಗಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಸಂತಾಪ ಸೂಚಿಸಿದರು.

ಆರ್ಥಿಕ ಸುಸ್ಥಿರತೆ ಎಂದರೇ ಕೇವಲ ಒಂದು ವರ್ಷದ ಅಭಿವೃದ್ಧಿ ಅಲ್ಲ. ನಿರಂತರವಾಗಿ ದೇಶದ ಆರ್ಥಿಕ ವ್ಯವಸ್ಥೆಗೆ ಬಹುದೊಡ್ಡ ಅರ್ಥ ಕಲ್ಪಿಸಿದ್ದಾರೆ ಎಂದ ಅವರು, ತಮ್ಮ ಹಾಗೂ ಡಾ.ಮನಮೋಹನ್ ಸಿಂಗ್ ಅವರು ಭಾಗಿಯಾಗಿದ್ದ ಕಾರ್ಯಕ್ರಮದ ನೆನಪನ್ನು‌ ಮೆಲುಕು ಹಾಕಿದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/12/2024 05:59 pm

Cinque Terre

79.52 K

Cinque Terre

0

ಸಂಬಂಧಿತ ಸುದ್ದಿ