ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರೈತ ದಿನಾಚರಣೆ- ನೇಗಿಲಯೋಗಿ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ: ನಾವೆಲ್ಲರೂ ಹೊಟ್ಟೆ ತುಂಬುವಷ್ಟು ಊಟ ಮಾಡಿ ಹಸಿವೆ ಇಲ್ಲದೆ ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿದ್ದರೆ, ಇದಕ್ಕೆ ರೈತರ ಶ್ರಮವೇ ಕಾರಣ.

ಅದಕ್ಕಾಗಿ ನಾವೆಲ್ಲರೂ ಅನ್ನ ತಿನ್ನುವ ಮೊದಲು ರೈತರನ್ನು ಸ್ಮರಿಸಬೇಕು ಎಂಬುವಂತ ಮಹತ್ವದ ನಿರ್ಧಾರದೊಂದಿಗೆ ಹುಬ್ಬಳ್ಳಿ ತಾಲೂಕಿನ ರೈತ ಸಂಘದಿಂದ ರೈತ ದಿನಾಚರಣೆ ಅದ್ದೂರಿಯಾಗಿ ಆಚರಿಸಲಾಯಿತು.

ಹುಬ್ಬಳ್ಳಿ ತಾಲೂಕು ರೈತ ಸಂಘ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಹಾಗೂ ನೇಗಿಲಯೋಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕ ರೈತರಿಗೆ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಅನ್ನದಾತನಿಗೆ ಗೌರವ ಸಮರ್ಪಣೆ ಮಾಡಲಾಯಿತು.

ರೈತರಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕು. ನಮಗೆಲ್ಲರಿಗೂ ಡಾಕ್ಟರ್, ಲಾಯರ್, ಇಂಜಿನಿಯರ್ ಗಳು ಮಾತ್ರ ಮುಖ್ಯ ಎನಿಸುತ್ತಾರೆ. ಆದರೆ, ಮೂರು ಹೊತ್ತು ಅನ್ನಕ್ಕೆ ಕಾರಣವಾಗಿರುವ ರೈತನ ನೆನಪು ಮಾತ್ರ ಬರುವುದಿಲ್ಲ. ಈ ನಿಟ್ಟಿನಲ್ಲಿ ಅನ್ನದಾತನ ಪರಿಶ್ರಮವನ್ನು ನೆನಪಿಸುವ ಸದುದ್ದೇಶದಿಂದ ಇಂತಹದೊಂದು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಹುಬ್ಬಳ್ಳಿ ತಾಲೂಕು ರೈತ ಸಂಘದಿಂದ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಹಾಗೂ ನೇಗಿಲಯೋಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ, ಚನ್ನಬಸಪ್ಪ ಅಸುಂಡಿ ನೇತೃತ್ವದಲ್ಲಿ ಡಾ.ಅಬ್ದುಲ್‌ಖಾದರ್ ನಡಕಟ್ಟಿನ ಅವರನ್ನು ಸನ್ಮಾನಿಸಲಾಯಿತು. ಕಲ್ಲನಗೌಡ್ರ ಪಾಟೀಲ, ಸಣ್ಣ ಇಮಾಮಸಾಬ್ ಮೊರಬ, ಪರಮೇಶ್ವರ ಬಂಡೆಪ್ಪನವರ, ಯಲ್ಲಪ್ಪಗೌಡ ಪಾಟೀಲ, ಕಲ್ಯಾಪ್ಪ ಬೆಂತೂರ ಸೇರಿ ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದ ರೈತರಿಗೆ ರೈತ ಸಂಘದಿಂದ ಸನ್ಮಾನಿಸಲಾಯಿತು.

ಸಿದ್ದಪ್ಪ ಮೀಶಿ, ಮೋಹನ ಅಸುಂಡಿ, ಫಕೀರಗೌಡ ಪಾಟೀಲ, ಮುದಕಪ್ಪ ನಂದಿಹಳ್ಳಿ, ಸಿದ್ದಪ್ಪ ಮೀಶಿ, ಗುರುಸಿದ್ದಪ್ಪ ಕಟಗಿ, ಬಸಪ್ಪ ಹಿರಿಗಣ್ಣವರ ಇತರರು ಇದ್ದರು.

Edited By : Manjunath H D
Kshetra Samachara

Kshetra Samachara

27/12/2024 08:16 pm

Cinque Terre

19.09 K

Cinque Terre

0

ಸಂಬಂಧಿತ ಸುದ್ದಿ