ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬದಲಾಯಿಸಿದ ಹೆಮ್ಮೆಯ ನಾಯಕ ಮನಮೋಹನ್ ಸಿಂಗ್ - ಸಂಸದ ಬೊಮ್ಮಾಯಿ

ಹುಬ್ಬಳ್ಳಿ: ದೇಶ ಕಂಡ ಶ್ರೇಷ್ಠ ತಜ್ಞ ಸಜ್ಜನ ರಾಜಕಾರಣಿ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ನಿಧನ, ಎಲ್ಲರಿಗೂ ಆಘಾತ ತಂದಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಕಳವಳ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇಡೀ ದೇಶ ದುಃಖದಲ್ಲಿ ಮುಳುಗಿದ್ದು ಒಬ್ಬ ವ್ಯಕ್ತಿ ಇಲ್ಲದೇ ಇರುವಾಗ ಅವರ ಮಹತ್ವ ಗೊತ್ತಾಗುತ್ತದೆ. ಅವರು ಮಾಡಿದ ಕಾರ್ಯ ಗೊತ್ತಾಗುತ್ತದೆ. ಮನಮೋಹನ್ ಸಿಂಗ್ ಒಬ್ಬ ಸಾಮಾನ್ಯ ರಾಜಕಾರಣಿ ಆಗಿರಲಿಲ್ಲ. ಅವರು ಪ್ರೊಫೆಸರ್ ಆಗಿ ವರ್ಲ್ಡ್ ಬ್ಯಾಂಕ್ ನಲ್ಲಿ ಕೆಲಸ ಮಾಡಿ, ಓರ್ವ ಆರ್ಥಿಕ ತಜ್ಞರಾಗಿ ಕೆಲಸ ಮಾಡಿದವರು. ಅಂದಿ‌ನ ಪ್ರಧಾನ ಮಂತ್ರಿ ನರಸಿಂಹ ರಾವ್ ಅವರನ್ನ ಆರ್ಥಿಕ ಮಂತ್ರಿ ಮಾಡಿದವರು. ಇವರ ಬಗ್ಗೆ ಒಂದು ಮಾತು ಹೇಳಿದರೆ ತಪ್ಪಾಗಲಾರದು. ಅಂದಿನ ಆರ್ಥಿಕ ಸಚಿವ ಮನಮೋಹನ್ ಸಿಂಗ್ ಅವರಿಗೆ ಆಗಲಿ ಪ್ರಧಾನ ಮಂತ್ರಿ ನರಸಿಂಹ ಅವರಿಗೆ ಆಗಲಿ ಯಾವುದೇ ರಾಜಕೀಯ ಒತ್ತಡ ಇರಲಿಲ್ಲ. ಇದೇ ರೀತಿ ಆಡಳಿತ ಮಾಡಬೇಕು ಎಂಬ ಒತ್ತಡ ಮಾಡಬೇಕು ಇವರಿಗೆ ಒಳ್ಳೆಯ ಅವಕಾಶ ಇತ್ತು. ಇದ್ದ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಅವಕಾಶ ಒದಗಿ ಬಂದಿತು. ಜಾಗತೀಕರಣ ಉದಾರೀಕರಣ ಅಂದಿನ ದಿನಗಳಲ್ಲಿ ಮಾಡಿದ್ದರಿಂದ ವಿದೇಶಿ ಬಂಡವಾಳ ಹೆಚ್ಚಾಯಿತು. ಐಎಂಎಫ್ ಆರ್ಥಿಕ ಸಹಾಯ ಸಹ ಸಿಕ್ಕಿತು. ರಾಜಕೀಯ ದಿವಾಳಿತನವಾಗುವುದನ್ನ ತಡೆದರು. ಎಲ್ಲಾ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಆದವು ಎಂದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/12/2024 06:00 pm

Cinque Terre

40.01 K

Cinque Terre

1

ಸಂಬಂಧಿತ ಸುದ್ದಿ