ಕುಂದಗೋಳ : ಕುಂದಗೋಳ ತಾಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ಡಿ.13 ರಂದೇ ಸುರೇಶ ಭೀಮಪ್ಪಾ ಐನಾಪುರ ಎಂಬುವವರನ್ನು ತಾತ್ಕಾಲಿಕವಾಗಿ ಜಿಲ್ಲಾ ಪಂಚಾಯತ್ ನಿಯೋಜನೆ ಮಾಡಿ 13 ದಿನ ಕಳೆಯುತ್ತಾ ಬಂದರೂ ಅಧಿಕಾರಿ ಮಾತ್ರ ತಾಲೂಕು ಪಂಚಾಯಿತಿಗೆ ಹಾಜರಾಗಿಲ್ಲ.
ಹೌದು ! 2019 ರಿಂದ ಇಲ್ಲಿಯವರೆಗೆ ಕುಂದಗೋಳ ತಾಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿ ಹುದ್ದೆಯನ್ನು ಯಾವುದೇ ಆದೇಶ ಪ್ರತಿ ಇಲ್ಲದೆ, ಹೆಚ್ಚುವರಿಯಾಗಿ ಪ್ರಥಮ ದರ್ಜೆ ಲೆಕ್ಕ ಸಹಾಯಕ ಕೆ.ಎನ್.ಮುಲ್ಲಾ ಎಂಬುವವರು ನಿರ್ವಹಣೆ ಮಾಡುತ್ತಿದ್ದರು.
ಈ ಬಗ್ಗೆ ಮಾಧ್ಯಮಗಳು ಸುದ್ದಿ ಸಹ ಬಿತ್ತರಿಸಿ ಜಿಲ್ಲಾ ಪಂಚಾಯತ್ ಸಿಇಒ ಸ್ವರೂಪ ಟಿಕೆ ಮೇಡಂ ಗಮನ ಸೆಳೆದಿದ್ದವು. ಬಳಿಕ ಡಿಸೆಂಬರ್ 13 ರಂದು ಭೀಮಪ್ಪ ಸುರೇಶ್ ಐನಾಪೂರ ಇವರನ್ನು ಕುಂದಗೋಳ ತಾಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿಯಾಗಿ ತಾತ್ಕಾಲಿಕವಾಗಿ ನಿಯೋಜನೆ ಮಾಡಿ 13 ದಿನ ಕಳೆಯುತ್ತಿದ್ದರೂ ಅಧಿಕಾರಿ ಕಚೇರಿಗೆ ಭೇಟಿ ಕೊಟ್ಟಿಲ್ಲ, ಹುದ್ದೆಗೆ ಹಾಜರಾಗಿಲ್ಲ.
ಈ ಎಲ್ಲಾ ವಿಷಯ ಗಮನಿಸಿದ್ರೆ ಸಹಾಯಕ ಲೆಕ್ಕಾಧಿಕಾರಿ ಕುಂದಗೋಳಕ್ಕೆ ಬರದಂತೆ ಕಾಣದ ಕೈಗಳು ತಡೆದಿವೆಯಾ ಎಂಬ ಪ್ರಶ್ನೆ ವ್ಯಕ್ತವಾಗುತ್ತಿದೆ.
ಮುಖ್ಯವಾಗಿ ತಾತ್ಕಾಲಿಕವಾಗಿ ಹುದ್ದೆಯಲ್ಲಿರುವ ಪ್ರಥಮ ದರ್ಜೆ ಲೆಕ್ಕ ಸಹಾಯಕರಾದ ಕೆ.ಎನ್.ಮುಲ್ಲಾ ಎಂಬುವವರು ಹೆಚ್ಚುವರಿ ಸಹಾಯಕ ಲೆಕ್ಕಾಧಿಕಾರಿ ಹುದ್ದೆಯನ್ನು ವಹಿಸಿಕೊಂಡ ಬಗ್ಗೆ ಯಾವುದೇ ಆದೇಶ ಪ್ರತಿ ಇಲ್ಲದೆ ಕಾರ್ಯ ಮಾಡಿದ್ದಾರೆ. ಈ ಬಗ್ಗೆ 4 ವರ್ಷ 4 ಜನ ತಾಲೂಕು ಪಂಚಾಯಿತಿ ಅಧಿಕಾರಿಗಳು ಬದಲಾದರೂ ಪರಿಶೀಲನೆ ನಡೆದಿಲ್ಲ.
ಒಟ್ಟಾರೆ ತಾಲೂಕು ಪಂಚಾಯಿತಿ ಆಡಳಿತ ನಿಲುವು ಅಸ್ಪಷ್ಟವಾಗಿ ಮನಬಂದಂತೆ ನಡೆದಿದೆ. ಇದೀಗ ನಿಯೋಜನೆಗೊಂಡ ಅಧಿಕಾರಿ ಕರ್ತವ್ಯಕ್ಕೆ ಹಾಜರಾಗದೆ ಇರುವುದು ಚರ್ಚೆಗೆ ಗ್ರಾಸವಾಗಿದೆ.
ಶ್ರೀಧರ್ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ
Kshetra Samachara
27/12/2024 03:09 pm