ಕುಂದಗೋಳ : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರೈತ ದಿನಾಚರಣೆ ಹಾಗೂ ಹೊಸ ವರ್ಷ ಸ್ವಾಗತ ಕಾರ್ಯಕ್ರಮ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾಲಯದ ಧಾರವಾಡ ಹಾಗೂ ಗದಗ ಸಂಚಾಲಕಿ ಬಿ.ಕೆ.ಜಯಂತಿ ಅಕ್ಕನವರು ಮಾತನಾಡಿ ಇಂದಿನ ಒತ್ತಡದ ಜಗತ್ತಿನಲ್ಲಿ ಪರಮಾತ್ಮನ ಧ್ಯಾನ, ಯೋಗ ಧಾರಣೆ, ಸೇವೆ, ಜ್ಞಾನದ ಖಜಾನೆ ಭರ್ತಿ ಮಾಡಿಕೊಳ್ಳಿ. ಮನಸ್ಸು ಬುದ್ಧಿಯಿಂದ ಪರಮಾತ್ಮನ ನೆನಪಿನಿಂದ ಸದಾ ಖುಷಿಯಾಗಿ ಜೀವನ ನಡೆಸಿ, ಆ ಖುಷಿಯನ್ನು ಮತ್ತೊಬ್ಬರಿಗೆ ಹಂಚುವ ಮೂಲಕ ಶಾಂತತೆ, ಪವಿತ್ರತೆ, ಪ್ರೀತಿ ಇಂತಹ ಅಮೂಲ್ಯ ಸಂಪತ್ತನ್ನು ಪ್ರಾಪ್ತಿ ಮಾಡಿಕೊಳ್ಳಬೇಕೆಂದು ಹೇಳಿದರು.
ರೈತ ಮುಖಂಡ ಸೋಮರಾವ್ ದೇಸಾಯಿ ಮಾತನಾಡಿ ಸಾಮಾಜಿಕ ಕಳಕಳಿ ಹೊಂದಿರುವ ಈ ಈಶ್ವರಿಯ ವಿಶ್ವವಿದ್ಯಾಲಯ ಜೀವನ ಶೈಲಿಗೆ ಮಾರ್ಗದರ್ಶನಕ್ಕೆ ನಿತ್ಯವೂ ಪರಮಾತ್ಮನ ಜ್ಞಾನ ತಿಳುವಳಿಕೆ ಕೊಡುವ ಮೂಲಕ ಪುಣ್ಯ ಪ್ರಾಪ್ತಿಗೆ ನಮಗೆ ದಾರಿ ದೀಪವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಂದಗೋಳ ತಾಲೂಕಿನ ರೈತರಾದ ನಿಂಗಪ್ಪ ಪಲ್ಲೇದ, ಯಲ್ಲಪ್ಪ ಮಾಯಣ್ಣವರ, ಪಾಂಡಪ್ಪ ಗೋರ್ಪಡೆ, ದೇವಪ್ಪ ಮೊರೊಪಂತರ್, ಚಂದ್ರಶೇಖರಯ್ಯ ಚಿಕ್ಕಮಠ, ಮಲ್ಲಪ್ಪ ತಡಸದ, ರಾಜಶೇಖರ ಹೊಂಬಳ ಇವರುಗಳನ್ನು ಸನ್ಮಾನಿಸಲಾಯಿತು.
ಸ್ಥಳೀಯ ಆಶ್ರಮದ ಸಂಚಾಲಕಿ ಬಿ.ಕೆ. ಸುನಿತಾ ಅಕ್ಕನವರು ಪ್ರತಿನಿತ್ಯ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆಯುವ ರಾಜಯೋಗ, ಧ್ಯಾನ, ಜ್ಞಾನ ತರಗತಿಗೆ ಹಾಜರಾಗಿ ಪರಮಾತ್ಮನ ಜ್ಞಾನ ಅರಿತುಕೊಂಡು ಪಾವನರಾಗಿರಿ ಎಂದು ತಿಳಿಸಿದರು.
Kshetra Samachara
28/12/2024 01:24 pm