ಕಲಘಟಗಿ : ಕಲಘಟಗಿ ಪಟ್ಟಣದ ಆಂಜನೇಯ ಸರ್ಕಲ್ ಬಳಿ ಇರುವ ಅಯ್ಯಪ್ಪಸ್ವಾಮಿ ಭಕ್ತ ವೃಂದದಲ್ಲಿ ನಿನ್ನೆ ಮಧ್ಯಾಹ್ನ ಅಯ್ಯಪ್ಪ ಸ್ವಾಮಿ ಮಹಾಪಡಿ ಪೂಜೆ ಹಾಗೂ ಅನ್ನಸಂತರ್ಪಣೆ ಜರುಗಿತು.
ಸುಮಾರು ನಾಲ್ಕು ದಶಕಗಳಿಂದ ಇಲ್ಲಿ ಅಯ್ಯಪ್ಪ ಸ್ವಾಮಿಯ ಸನ್ನಿಧಾನ ಮಾಡುತ್ತಾ ಬಂದಿದ್ದು ಇಂದಿಗೂ ಇಲ್ಲಿ ಅಯ್ಯಪ್ಪನ ಮಾಲಾಧಾರಿಗಳು ವೃತಾಚರಣೆ ಮತ್ತು ಪೂಜೆ ಹಾಗೂ ಅನ್ನಸಂತರ್ಪಣೆ ಮಾಡುತ್ತಾ ಬಂದಿದ್ದಾರೆ.
ಈ ಸನ್ನಿಧಾನವು ನಾಲ್ಕು ದಶಕಗಳ ಹಿಂದೆ ಪ್ರಥಮವಾಗಿ ಮಧುಗುರುಸ್ವಾಮಿ ಹಾಗೂ ಅಶೋಕ್ ಗುರುಸ್ವಾಮಿಗಳು ಪ್ರಾರಂಭ ಮಾಡಿ ಪೂಜೆ ಸಲ್ಲಿಸುತ್ತಾ ಬಂದಿದ್ದು ನಂತರದ ದಿನಗಳಲ್ಲಿ ಹಲವಾರು ಗುರುಸ್ವಾಮಿಗಳು ಪೂಜೆ ಸಲ್ಲಿಸಿ ಇಂದು ನಾರಾಯಾಣ ಗುರುಸ್ವಾಮಿಗಳು ಮುಂದುವರೆಸುತ್ತಾ ಬಂದಿದ್ದಾರೆ.
ಕಲಘಟಗಿಯ ಅಯ್ಯಪ್ಪ ಭಕ್ತರಿಗೆ ಈ ಸನ್ನಿಧಾನದಲ್ಲಿ ನಡೆಯುವ ಪೂಜೆ ಹಾಗೂ ಪ್ರಸಾದಕ್ಕೆ ಹೆಚ್ಚು ಮಹತ್ವ ಪಡೆದಿದ್ದು ಪೂಜೆಯ ದಿನದಂದು ಸಾವಿರಾರು ಜನರು ಬಂದು ಅಯ್ಯಪ್ಪಸ್ವಾಮಿ ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಅಯ್ಯಪ್ಪನ ಕೃಪೆಗೆ ಪಾತ್ರರಾಗುವುದು ವಿಶೇಷವಾಗಿದೆ.
ವರದಿ : ಉದಯ ಗೌಡರ, ಪಬ್ಲಿಕ್ ನೆಕ್ಸ್ಟ್, ಕಲಘಟಗಿ
Kshetra Samachara
27/12/2024 01:01 pm