ಹುಬ್ಬಳ್ಳಿ: ಅಯ್ಯಪ್ಪ ಮಾಲಾಧಾರಿಗಳಿಗೆ ವರ್ಷದ ಕೊನೆ ತಿಂಗಳು ಕಂಟಕವಾಗಿ ಪರಿಣಮಿಸಿದೆ. ಕಳೆದ ನಾಲ್ಕು ದಿನಗಳ ಹಿಂದೆ ಸಿಲಿಂಡರ್ ಸ್ಫೋಟಗೊಂಡು 9 ಜನ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ರು. ಆದ್ರೆ ಇಂದು ನಸುಕಿನ ಜಾವ 9 ಜನರಲ್ಲಿ ಇಬ್ಬರು ಮಾಲಾಧಾರಿಗಳು ಪ್ರಾಣ ಬಿಟ್ಟಿದ್ದಾರೆ. ವೈದ್ಯರು ನಾಲ್ಕು ದಿನಗಳಿಂದ ನಿರಂತರ ಪ್ರಯತ್ನ ಪಟ್ರು, ಇಬ್ಬರು ಮಾಲಾಧಾರಿಗಳು ಸಾವನ್ನಪ್ಪಿದ್ದಾರೆ.
ಗಾಯಾಳು ಮಾಲಾಧಾರಿಗಳನ್ನ ಅಯ್ಯಪ್ಪ ಕಾಪಾಡಲೇ ಇಲ್ಲ, ಇದರಿಂದ ನೊಂದು ಐದು ಜನ ಮಾಲಾಧಾರಿಗಳು, ಮಾಲೆಯನ್ನು ಕಳಚಿದ್ದಾರೆ. ಅಷ್ಟಕ್ಕೂ ಏನಿದು ಮಾಲಾಧಾರಿಗಳ ಕಣ್ಣೀರ ಕಥೆ ಅಂತೀರಾ ಈ ಸ್ಟೋರಿ ನೋಡಿ.
ಉಣಕಲ್'ನಲ್ಲಿರೋ ಅಚ್ಚವ್ಚನ ಕಾಲೋನಿಯಲ್ಲಿ ಡಿ 22 ರಂದು ಬೆಳಗಿನ ಜಾವ ಸಿಲಿಂಡರ್ ಸ್ಪೋಟಗೊಂಡು 9 ಜನ ಮಾಲಾಧಾರಿಗಳು ಗಾಯಗೊಂಡಿದ್ರು. 9 ಜನರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗತಿತ್ತು. ಬೆಂಗಳೂರಿನಿಂದ ತಜ್ಞ ವೈದ್ಯರು ಚಿಕಿತ್ಸೆ ನೀಡಿದ್ರು. ಇಷ್ಟಾದರೂ ಇಂದು ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಜಾವ ಇಬ್ಬರು ಮೃತರಾಗಿದ್ದರೆ. ಮಾಲಾಧಾರಿಗಳಾದ 58 ವರ್ಷದ ನಿಜಲಿಂಗಪ್ಪ ಬೇಪುರಿ, 17 ವರ್ಷದ ಸಂಜಯ್ ಸವದತ್ತಿ ಮೃತಪಟ್ಟ ಸುದ್ದಿ ತಿಳಿದು ಅವರ ಜೊತೆಯೇ ಇರುತ್ತಿದ್ದ ಬೇರೆ ಅಯ್ಯಪ್ಪ ಮಾಲಾಧಾರಿಗಳು ಅಯ್ಯಪ್ಪನ ಮಾಲೆಯನ್ನೇ ತೆಗೆದಿದ್ದಾರೆ. ಇನ್ನುಳಿದ 7 ಜನರಿಗೆ ಏನು ಹೆಚ್ಚು ಕಡಿಮೆ ಆಗಬಾರದು ಒಂದು ವೇಳೆ ಆದ್ರೆ ಇನ್ನ್ಯಾವತ್ತು ಅಯ್ಯಪ್ಪ ಮಾಲೆಯನ್ನೇ ಹಾಕಲ್ಲ ಅಂತಾರೇ ಮಾಲೆ ತೆಗೆದ ಮಂಜುನಾಥ.
ಕಿಮ್ಸ್ ಮುಂಭಾಗ ಮೃತರ ಕುಟುಂಬಸ್ಥರು ಕಣ್ಣೀರ ಕೋಡಿ ಹರಿದಿತ್ತು.ಇಬ್ಬರು ಮಾಲಾಧಾರಿಗಳ ಸಾವನ್ನಪ್ಪಿದ ಹಿನ್ನಲೆ ಐವರು ಅಯ್ಯಪ್ಪನ ಮಾಲೆಯನ್ನ ತೆಗೆದಿದ್ದಾರೆ. ಅಚ್ಚವ್ವನ ಕಾಲೋನಿಯ ಸನ್ನಿಧಿಯಲ್ಲಿ ಒಟ್ಟು 14 ಜನ ಮಾಲಾಧಾರಿಗಳಿದ್ರು. ಅದರ ಪೈಕಿ ಸನ್ನಿಧಿಯ ಮೇಲಿನ ಕೋಣೆಯಲ್ಲಿ 9 ಜನ ಇದ್ರು, ಕೆಳೆಗ 5 ಜನ ಇದ್ರು. ಹೀಗಾಗಿ ಆ ಐದು ಜನರು ಇಂದು ಮಾನಸಿಕವಾಗಿ ನೊಂದು ತಾವು ಧರಿಸಿದ ಮಾಲೆಯನ್ನು ತಗೆದು ಹಾಕಿದ್ದೇವೆ ಅಂತಾರೇ ಮಾಲೆ ಹಾಕಿದ್ದ ಕಲ್ಮೇಶ
ಒಟ್ಟಾರೆ ಸುಟ್ಟ ಗಾಯಗಳಿಂದ ಜೀವನ್ಮರಣ ನಡುವೆ ಹೋರಾಟ ಮಾಡ್ತಿದ್ದ ಮಾಲಾಧಾರಿಗಳನ್ನ ಅಯ್ಯಪ್ಪ ಕಾಪಾಡಲೇ ಇಲ್ಲ, 9 ಜನರ ಪೈಕಿ ಇಬ್ಬರು ಸಾವನ್ನಪ್ಪಿದ್ದು,7 ಜನ ಪೈಕಿ ಆರು ಜನರ ಸ್ಥಿತಿ ಚಿಂತಾಕನಕವಾಗಿದ್ದಾರೆ. ಉಳಿದವರ ಮೇಲಾದರೂ ಮಣಿಕಂಠ ಕೃಪೆ ತೋರ್ತಾನಾ ಕಾದು ನೋಡಬೇಕಿದೆ.
ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/12/2024 04:05 pm