ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಜ್ಜಿಯ ಗಲ್ಲ ಸವರಿ, ದುಡ್ಡು ಕೊಟ್ಟು ಹಣ್ಣು ಖರೀದಿಸಿದ ಸಚಿವ ಲಾಡ್

ಧಾರವಾಡ: ಧಾರವಾಡದ ಎಲ್‌ಇಎ ಕ್ಯಾಂಟೀನ್‌ಗೆ ಬಂದಿದ್ದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಅಲ್ಲಿ ಚಹಾ ಕುಡಿದು ಹೊರಗೆ ಬರುತ್ತಿದ್ದಂತೆ ಫುಟ್‌ಪಾತ್ ಮೇಲೆ ಓರ್ವ ಅಜ್ಜಿ ಹಣ್ಣು ಮಾರುತ್ತ ಕುಳಿತಿದ್ದನ್ನು ಕಂಡು ಮಾನವೀಯತೆ ಮೆರೆದಿದ್ದಾರೆ.

ನೇರವಾಗಿ ಆ ಅಜ್ಜಿಯ ಬಳಿ ತೆರಳಿ ತಾವೂ ಫುಟ್‌ಪಾತ್ ಮೇಲೆಯೇ ಕುಳಿತು ಅಜ್ಜಿಯ ವ್ಯಾಪಾರದ ಬಗ್ಗೆ ವಿಚಾರಿಸಿದ್ದಾರೆ. ಆ ನಂತರ ಅಜ್ಜಿ ಇಟ್ಟಿದ್ದ ಎಲ್ಲಾ ಹಣ್ಣುಗಳನ್ನು ತಾವೇ ಖರೀದಿಸಿ ಆಕೆಗೆ ದುಡ್ಡು ಕೊಟ್ಟು ಸಹಾಯ ಮಾಡಿದ್ದಾರೆ. ಅಜ್ಜಿಯ ಗಲ್ಲ ಸವರಿ ಆಕೆಗೆ ಅಭಯ ನೀಡಿದ್ದಾರೆ. ಸಚಿವರು ಗಲ್ಲು ಸವರುತ್ತಿದ್ದಂತೆ ಆ ಅಜ್ಜಿ ನಾಚಿ ನೀರಾದ ಪ್ರಸಂಗ ಕೂಡ ನಡೆಯಿತು.

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/12/2024 10:16 am

Cinque Terre

66.54 K

Cinque Terre

5

ಸಂಬಂಧಿತ ಸುದ್ದಿ