ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಗಾಯಗೊಂಡ ವ್ಯಕ್ತಿ ಚಿಕಿತ್ಸೆಗೆ ರವಾನೆ ! ಮಾನವೀಯತೆ ಮೆರೆದ ಜನತೆ

ಕುಂದಗೋಳ : ಚಲಿಸುತ್ತಿರುವ ರೈಲಿನಿಂದ ಬಿದ್ದು ತೀವ್ರ ರಕ್ತಸಿಕ್ತವಾಗಿ ಗಾಯಗೊಂಡು ಕಡಪಟ್ಟಿ ಗ್ರಾಮಕ್ಕೆ ಆಗಮಿಸಿದ್ದ ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯವನ್ನು ಗ್ರಾಮಸ್ಥರು ಮಾಡಿದ್ದಾರೆ.

ಹೌದು ! ಹುಬ್ಬಳ್ಳಿ ಬೆಂಗಳೂರು ರೈಲ್ವೆ ಹಳಿ ಸಮೀಪ ಇರುವ ಕಡಪಟ್ಟಿ ಗ್ರಾಮದ ತಾನು ರೈಲಿನಿಂದ ಆಯತಪ್ಪಿ ಬಿದ್ದಿದ್ದೇನೆ ಎಂದು ಹೇಳಿಕೊಂಡು ಬಂದ ತೀವ್ರ ರಕ್ತಸಿಕ್ತವಾಗಿ ಗಾಯಗೊಂಡ ವ್ಯಕ್ತಿಯನ್ನು ಕಂಡು ಉಪಚರಿಸಿದ ಗ್ರಾಮಸ್ಥರು, ಆಂಬ್ಯುಲೆನ್ಸ್ ಮತ್ತು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ.

ಹಿಂದಿ ಭಾಷೆ ಮಾತನಾಡುವ ವ್ಯಕ್ತಿ ಕೇರಳ ಮೂಲದವ ಎಂದು ಆತನೇ ಹೇಳಿದ್ದಾನೆ, ಕರೆ ಮಾಡಿದ ತಕ್ಷಣ ಆಗಮಿಸಿದ ಆಂಬ್ಯುಲೆನ್ಸ್ ಚಾಲಕ ನಾಗರಾಜ್ ದೊಡ್ಡಮನಿ, ನರ್ಸಿಂಗ್ ಸ್ಟಾಫ್ ಅನಿಲ್ ಗಾಯಾಳುವನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಘಟನೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ

Edited By : Ashok M
Kshetra Samachara

Kshetra Samachara

26/12/2024 08:26 pm

Cinque Terre

13.11 K

Cinque Terre

0

ಸಂಬಂಧಿತ ಸುದ್ದಿ