ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಾರ್ಮಿಕ ಇಲಾಖೆಯಿಂದ ಕಲ್ಯಾಣವಾಯ್ತು ಶ್ರಮಿಕರ ಬದುಕು: ಸಚಿವ ಸಂತೋಷ ಲಾಡ್ ಕಾರ್ಯಕ್ಕೆ ಮೆಚ್ಚುಗೆ

ಹುಬ್ಬಳ್ಳಿ: ದುಡಿಯುವ ದುಡ್ಡಿನಲ್ಲಿ ಮನೆ ನಡೆಸುವುದು ಕಷ್ಟ. ಕಾರ್ಮಿಕರಾಗಿ ಬದುಕಿನ ಬಂಡೆ ಮುನ್ನೆಡೆಸುವುದೇ ದುಸ್ತರ ಎಂದವರಿಗೆ ಅಭಯ ಹಸ್ತ ನೀಡಿರುವುದು ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ. ಸಚಿವರಾದ ಸಂತೋಷ ಲಾಡ್ ಅವರ ಜನಪರ ಕಾಳಜಿ, ದೂರ ದೃಷ್ಟಿಯಿಂದ ಕಾರ್ಮಿಕರ ಬದುಕಿಗೆ ಈಗ ಬಹುದೊಡ್ಡ ಭದ್ರತೆ ಬಂದೊದಗಿದೆ. ಕಾರ್ಮಿಕ ಇಲಾಖೆಯಿಂದ ಈಗ ಲಕ್ಷಾಂತರ ಕುಟುಂಬಗಳ ಬದುಕು ಈಗ ಬಂಗಾರವಾಗಿದೆ.

ಕಟ್ಟಡ ಕಾರ್ಮಿಕರು ಮಾತ್ರವಲ್ಲದೇ ಬಹುತೇಕ ಶ್ರಮಿಕ ವರ್ಗಕ್ಕೆ ಭದ್ರತೆಯೇ ಇಲ್ಲವಾಗಿತ್ತು. ಇದೆಲ್ಲಾ ಸಂಗತಿಯನ್ನು ಅರಿತಿರುವ ಕಾರ್ಮಿಕ ಸಚಿವರು ದುಡಿಯುವ ಕೈಗಳಿಗೆ ಭದ್ರತೆಯ ರಕ್ಷಣೆಯನ್ನು ಕಟ್ಟಿರುವುದು ಹೆಮ್ಮೆಯ ಸಂಗತಿಯಾಗಿದೆ. 23 ವಲಯಗಳ ಕಾರ್ಮಿಕರ ಬದುಕಿಗೆ ಕಾರ್ಮಿಕ ಸಚಿವ ಸಂತೋಷ ಲಾಡ್ ಬಹುದೊಡ್ಡ ಅರ್ಥ ಕಲ್ಪಿಸಿದ್ದಾರೆ. ರಾಜ್ಯದ 30 ಲಕ್ಷ ಅಸಂಘಟಿತ ಕಾರ್ಮಿಕರಿಗೆ, 35 ಲಕ್ಷಕ್ಕೂ ಅಧಿಕ ಖಾಸಗಿ, ವಾಣಿಜ್ಯ ಸಾರಿಗೆ ಕಾರ್ಮಿಕರ ಬದುಕಿಗೆ ಬಹುದೊಡ್ಡ ಅರ್ಥ ಬಂದಂತಾಗಿದೆ. ಅಲ್ಲದೇ 60 ಲಕ್ಷಕ್ಕೂ ಹೆಚ್ಚಿನ ಉದ್ಯೋಗಿಗಳಿಗೆ ಕಾರ್ಮಿಕ ಇಲಾಖೆಯಿಂದ ಸಹಾಯ ಹಸ್ತ ದೊರೆತಿದ್ದು, ಈಗ ಎಲ್ಲ ವರ್ಗದ ಕಾರ್ಮಿಕರು ಸಚಿವರ ಕಾರ್ಯವನ್ನು ನೋಡಿ ಹೆಮ್ಮೆ ಪಡುವಂತಾಗಿದೆ.

ಭವ್ಯ ಭಾರತದಲ್ಲಿ ಕಾರ್ಮಿಕ ವರ್ಗದ ಶ್ರಮ ಗಣನೀಯವಾಗಿದೆ ಎಂದು ತೋರಿಸಿಕೊಟ್ಟವರು ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್. ದುಡಿಯುವ ವರ್ಗದ ಅಭಿವೃದ್ಧಿಯಾದರೆ ದೇಶವೇ ಅಭಿವೃದ್ಧಿ ಎಂಬುವಂತ ಬಹುದೊಡ್ಡ ಕನಸನ್ನು ಹೊಂದಿರುವ ಕನಸುಗಾರ ಮಹತ್ವದ ಮುನ್ನಡೆ ಇಟ್ಟಿದ್ದಾರೆ.

ಒಟ್ಟಿನಲ್ಲಿ ಶ್ರಮಿಕ ವರ್ಗದ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಶ್ರಮಜೀವಿ ಸಚಿವ ಸಂತೋಷ ಲಾಡ್. ಸರ್ಕಾರದ ಯೋಜನೆಯನ್ನು ಮನೆ, ಮನ ಮುಟ್ಟುವಂತೆ ಮಾಡಿರುವ ಕಾಯಕಯೋಗಿಗೆ ಈಗ ಎಲ್ಲೆಡೆಯೂ ಜನರ ಪ್ರಶಂಸೆ ವ್ಯಕ್ತವಾಗಿದ್ದು, ಸರ್ಕಾರದ ಯೋಜನೆ ಅರ್ಹರಿಗೆ ತಲುಪುವ ಕಾರ್ಯವಾಗಿದೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

26/12/2024 05:53 pm

Cinque Terre

85.4 K

Cinque Terre

6

ಸಂಬಂಧಿತ ಸುದ್ದಿ