ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಹಣ ಕೊಟ್ಟರು ಸಿಕ್ಕಿಲ್ಲ ಮನೆ ಹಕ್ಕು ಪತ್ರ - ಅಯ್ಯೋ ಬಡವರ ಗತಿ ಏನು?

ಕುಂದಗೋಳ: ನಾವು ವಾಸಿಸುವ ಜಾಗದ ಹಕ್ಕು ಪತ್ರ ನಮಗೆ ಸಿಗುತ್ತೆ ಎಂದು ಹತ್ತು ಹಲವು ವರ್ಷಗಳ ಸರ್ಕಾರಿ ಬಿಲ್ ಮತ್ತು ಜಾಗದ ಸರ್ವೇಗೆ 1200 ಕುಟುಂಬಗಳು ತಲಾ 500 ರೂಪಾಯಿಯಂತೆ ಹಣ ತುಂಬಿ ಇದೀಗ ಯಾವ ಸವಲತ್ತು ಸಿಗದೆ ತಾಲೂಕು ಪಂಚಾಯಿತಿ ಮತ್ತು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.

ಕುಂದಗೋಳ ತಾಲೂಕಿನ ಸಂಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂಬರ್ 75-76 ರಲ್ಲಿ ವಾಸಿಸುತ್ತಿರುವ ಬಡ, ಮಧ್ಯಮ, ಕೂಲಿ ಕಾರ್ಮಿಕರ ಕುಟುಂಬಗಳು ತಾವು ವಾಸ ಮಾಡುವ ಜಾಗ ಹಕ್ಕು ಪತ್ರಕ್ಕಾಗಿ ಶಾಸಕರು, ಸಚಿವರಿಗೆ ಮನವಿ ಕೊಟ್ಟು ಸುಸ್ತಾದರೂ ಪ್ರಯೋಜನವಾಗಿಲ್ಲ. ಬಳಿಕ ಸ್ಥಳೀಯ ಗ್ರಾಮ ಪಂಚಾಯಿತಿಗೆ ತಮ್ಮ ಮನೆ, ನೀರು, ಜಾಗದ ಬಿಲ್ ಪಾವತಿ ಮಾಡಿದ್ದಾರೆ. ಅದರಂತೆ ಜಾಗದ ಡಿ.ಜಿ.ಪಿ.ಎಸ್ ಸರ್ವೇ, ಡ್ರೋನ್ ಸರ್ವೇ, ನಕಾಶೆ ಪ್ರಿಂಟ್, ಡಾಟಾ ಪ್ರೋಸೆಸಿಂಗ್, ಮನೆ ಅಳತೆ ಮತ್ತು ಚಕ್ಕುಬಂದಿ ಕೈಗೊಳ್ಳಲು ಸಂಶಿ ಗ್ರಾಮದ ಖಾಸಗಿ ವ್ಯಕ್ತಿಗಳಿಗೆ ತಲಾ ಒಂದು ಕುಟುಂಬಕ್ಕೆ 500 ರಂತೆ 1200 ಕುಟುಂಬಗಳು ಹಣ ಭರಿಸಿವೆ.

ಆದರೆ, ದಿನಗಳು ಗತಿಸುತ್ತಾ ಹೋದವು ವಿನಃ ಪಾಪ ಬಡ ಮಧ್ಯಮ ವರ್ಗದ ಜನರಿಗೆ ಹಕ್ಕು ಪತ್ರ ಸಿಗಲೇ ಇಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪೊಲೀಸ್ ಠಾಣೆಗೆ ತೆರಳಿ ಅಲ್ಲಿಂದ ತಾಲೂಕು ಪಂಚಾಯಿತಿಗೆ ಆಗಮಿಸಿ ನ್ಯಾಯ ಕೇಳಿ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.

ಸದ್ಯ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ್ ಜನರ ಅಹವಾಲು ಸ್ವೀಕರಿಸಿ, ಶೀಘ್ರವೇ ಸಮಸ್ಯೆ ಪರಿಹಾರ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ, ಕಳೆದ ಹತ್ತು ಇಪ್ಪತ್ತು ಎಷ್ಟೋ ವರ್ಷಗಳಿಂದ ಇರುವ ಮನೆ ಹಕ್ಕು ಪತ್ರ ನೀಡುವ ಸಮಸ್ಯೆಗೆ ಇಂದಿಗೂ ಮುಕ್ತಿ ಸಿಕ್ಕಿಲ್ಲ. ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಗಮನಿಸಿ ಬಡ ಕುಟುಂಬಗಳ ಕಣ್ಣೀರು ಒರೆಸಬೇಕಿದೆ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Ashok M
Kshetra Samachara

Kshetra Samachara

26/12/2024 07:49 pm

Cinque Terre

14.65 K

Cinque Terre

0

ಸಂಬಂಧಿತ ಸುದ್ದಿ