ಧಾರವಾಡ: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಕೇತರ ಸಿಬ್ಬಂದಿಯ ವೈದ್ಯಕೀಯ ವೆಚ್ಚದ ಬಿಲ್‌ನ್ನು ನಿಯಮಾನುಸಾರ ಮರು ಪಾವತಿ ಮಾಡಬೇಕು, ಪರೀಕ್ಷಾ ವಿಭಾಗದ ಸಿಬ್ಬಂದಿಗೆ ಮೊದಲಿನಂತೆ ಪ್ರತಿ 6 ತಿಂಗಳಿಗೊಮ್ಮೆ ಪರಿಹಾರ ಭತ್ಯೆ ನೀಡಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಕೇತರ ನೌಕರ ಸಂಘದ ಸದಸ್ಯರು ಗುರುವಾರ ಕವಿವಿ ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿ ಕುಲಪತಿಗಳಿಗೆ ಮನವಿ ಸಲ್ಲಿಸಿದರು.
ಶಿಕ್ಷಕೇತರ ನೌಕರರಿಗೆ ಸರ್ಕಾರಿ ನಿಯಮಾವಳಿಯನ್ವಯ ಹಬ್ಬದ ಮುಂಗಡ ಹಣ ಮಂಜೂರು ಮಾಡಬೇಕು. ಬಿಎಲ್‌ಒ ಎಂದು ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯದ ಶಿಕ್ಷಕೇತರ ನೌಕರರನ್ನು ಬಿಎಲ್‌ಒ ಕಾರ್ಯ ನಿರ್ವಹಣೆಯಿಂದ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕು. 1996ರಿಂದ ಜಾರಿಯಾದ ವಿಶ್ವವಿದ್ಯಾಲಯದ ವೃಂದ ಮತ್ತು ನೇಮಕಾತಿ ನಿಯಮಾವಳಿ ಕಾಲ ಕಾಲಕ್ಕೆ ತಿದ್ದುಪಡಿಯಾಗದೇ ಇದ್ದು ತಿದ್ದುಪಡಿಗೆ ಕ್ರಮ ಕೈಗೊಳ್ಳಬೇಕು. ಕವಿವಿ ಮತ್ತು ಕೆಸಿಡಿ ಆವರಣದಲ್ಲಿರುವ ವಸತಿ ಗೃಹಗಳನ್ನು ದುರಸ್ತಿಗೊಳಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.
Kshetra Samachara
26/12/2024 08:18 pm