ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ವೇತನಶ್ರೇಣಿ ನಿಗದಿಗೆ ಒತ್ತಾಯ

ನವಲಗುಂದ: ಈಗಿನ ಕಾಲದಲ್ಲಿ ಎಷ್ಟೇ ವಿದ್ಯಾವಂತರಾದರೂ ಕಂಪ್ಯೂಟರ್ ನಿರ್ವಹಣೆ ಬರದಿದ್ದರೆ ಅನಕ್ಷರಸ್ಥ ಎನ್ನುವ ಹಾಗೆ ಆಗಿದೆ. ಕಂಪ್ಯೂಟರ್ ಇಲ್ಲವೆಂದರೆ ಯಾವ ಕೆಲಸವೂ ನಡೆಯದಂತಾಗಿದೆ ಕಂಪ್ಯೂಟರ್ ಅಪರೇಟರ್‌ಗಳಾದ ಮಂಜುನಾಥ ಕಳ್ಳಿಗುಡ್ಡ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಕಂಪ್ಯೂಟರ್ ಆಪರೇಟರ್‌ಗಳ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಮ್ಮನ್ನು ಸಹ ಸರಕಾರಿ ನೌಕರರನ್ನಾಗಿ ಪರಿಗಣಿಸಿ, ವೇತನಶ್ರೇಣಿ ನಿಗದಿ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಹರ್ಷವರ್ಧನ ಹಂಚಿನಾಳ, ಶಿವಾನಂದ ಉಪ್ಪಾರ, ಕಂಪ್ಯೂಟರ್ ಆಪರೇಟರ್‌ಗಳಾದ ಪ್ರಶಾಂತ ಹಿರೇಮಠ, ಪ್ರೇಮಾ ಗೊಲ್ಲರ, ವಿಜಯಲಕ್ಷ್ಮಿ ರಡೇರ್, ತಾಲ್ಲೂಕು ಯೋಜನಾಧಿಕಾರಿ ಬಿ.ಎಸ್. ಪಾಟೀಲ್,ಶೇಖಣ್ಣ ತೋಟದ, ಪ್ರಕಾಶ ಅಕ್ಕಿ, ಎಂ.ಎಂ. ನಾಯ್ಕ‌ರ್, ಪಿಡಿಒ ಸಂಘದ ಅಧ್ಯಕ್ಷ ವೀರಣ್ಣ ತೊಗ್ಗಿ, ಕಂಪ್ಯೂಟರ್ ಆಪರೇಟರ್‌ ಸಂಘದ ಜಿಲ್ಲಾ ಉಪಾಧ್ಯಕ್ಷ ಕರವೀರಪ್ಪ ಬೆಣ್ಣಿ ಇದ್ದರು.

Edited By : PublicNext Desk
Kshetra Samachara

Kshetra Samachara

27/12/2024 05:11 pm

Cinque Terre

7.67 K

Cinque Terre

0

ಸಂಬಂಧಿತ ಸುದ್ದಿ